ಪಡಂಗಡಿ: ಶ್ರೀ ಕ್ಷೇತ್ರ ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ದೇವಸ್ಥಾನದ ಪ್ರಧಾನ ಅರ್ಚಕ ಎಂ. ರಘುರಾಮ್ ಭಟ್ ಮಠ ಅವರ ಉಪಸ್ಥಿತಿಯಲ್ಲಿ ಸೆ. 30ರoದು ದುರ್ಗಾಷ್ಟಮಿ ಉತ್ಸವ, ದುರ್ಗಾ ಹೋಮ, ತಂತ್ರಿ ಶ್ರೀಪಾದ ಅವರ ನೇತೃತ್ವದಲ್ಲಿ ನಡೆಯಿತು.
ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಸಾರ್ವಜನಿಕ ಅನ್ನ ಸಂತರ್ಪಣೆ ಜರಗಿತು. ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ದಿನೇಶ್ ಮೂಲ್ಯ ಕೊಂಡೆಮಾರು, ಸಮಿತಿ ಸದಸ್ಯರಾದ ಶಾಂಭವಿ ಪಿ. ಬoಗೇರ, ಹರಿಪ್ರಸಾದ್ ಇರ್ವತ್ರಾಯ, ಸತೀಶ್ ಬoಗೇರ ಕುವೆಟ್ಟು, ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಸಂತೋಷ್ ಕುಮಾರ್ ಜೈನ್ ಪಡಂಗಡಿ, ಅಶ್ವಿತ್ ಕುಲಾಲ್ ಓಡೀಲು, ಸಂತೋಷ್ ಶೆಟ್ಟಿ ಹಲ್ಲoದೊಡಿ ಹಾಗೂ ಪಡಂಗಡಿ, ಕುವೆಟ್ಟು, ಓಡಿಲ್ನಾಳ, ಸೋಣಂದೂರು ಗ್ರಾಮದ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.