ಸೌಜನ್ಯ ಪ್ರಕರಣ ಮರು ತನಿಖೆ ಮಾಡಿ – ಸಿಬಿಐಗೆ ಸ್ನೇಹಮಯಿ ಕೃಷ್ಣ ಪತ್ರ ಮುಖೇನ ಮನವಿ – ವಿಠಲ ಗೌಡ ನಿಜ ಅಪರಾಧಿ ಎಂದು ಪತ್ರದಲ್ಲಿ ದಾಖಲು

0

ಬೆಳ್ತಂಗಡಿ: ಧರ್ಮಸ್ಥಳದ ಪಾಂಗಾಳ ನಿವಾಸಿಯಾಗಿದ್ದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ಮರು ತನಿಖೆ ಆಗಬೇಕೆಂದು ಸಾಮಾಜಿಕ ಹೋರಾಟಗಾರ ಸ್ನೇಹಮಯಿ ಕೃಷ್ಣ ಅವರು ಸಿಬಿಐಗೆ ಮನವಿ ಮಾಡಿದ್ದಾರೆ.

ಸೌಜನ್ಯ ಕೊಲೆ ಹಿಂದೆ ಆಕೆಯ ಮಾವ ಮತ್ತು ಕುಸುಮಾವತಿ ಅವರ ಸೋದರ ವಿಠಲ ಗೌಡ ಕೈವಾಡ ಇದೆ ಎಂದು ಗಂಭೀರ ಆರೋಪ ಮಾಡಿದ್ದರು. ಇದೇ ಅಂಶವನ್ನು ಸಿಬಿಐಗೆ ಬರೆದಿರುವ ಪತ್ರದಲ್ಲಿ ದಾಖಲಿಸಿರುವ ಅವರು, ಕೋರ್ಟ್ ಅನುಮತಿ ಪಡೆದು, ತಾವು ಸಲ್ಲಿಸಿರುವ ಸಾಕ್ಷ್ಯಾಧಾರ ಮತ್ತು ದಾಖಲೆಗಳನ್ನು ಪರಿಶೀಲಿಸಿ ಮರು ತನಿಖೆ ನಡೆಸಬೇಕು. ಇದರಿಂದ ನಿಜ ಆರೋಪಿ ವಿಠಲ ಗೌಡರ ಪಾತ್ರ ಬೆಳಕಿಗೆ ಬರಲಿದ್ದು, ಅವರಿಗೆ ಶಿಕ್ಷೆ ಕೊಡಿಸಬೇಕು ಎಂದು ತಿಳಿಸಿದ್ದಾರೆ.

ಇದು ಅತ್ಯಂತ ಗಂಭೀರವಾದ ಮತ್ತು ದೇಶಾದ್ಯಂತ ಸಂಚಲನ ಎಬ್ಬಿಸಿದ್ದ ಪ್ರಕರಣ. ಹೀಗಾಗಿ, ನಾನು ಸಲ್ಲಿಸಿರುವ ದಾಖಲೆಗಳನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತೀರಿ ಎಂದು ನಂಬಿದ್ದೇನೆ ಎಂದು ಸ್ನೇಹಮಯಿ ಕೃಷ್ಣ ತಾವು ಸಿಬಿಐಗೆ ಬರೆದ ಪತ್ರದಲ್ಲಿ ದಾಖಲಿಸಿದ್ದಾರೆ.

LEAVE A REPLY

Please enter your comment!
Please enter your name here