ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನಕಾರಿ ಬರಹ-ಬೆಳ್ತಂಗಡಿ ಮಲವಂತಿಗೆ ಯುವಕ ತಮಿಳುನಾಡಿನಲ್ಲಿ ಬಂಧನ

0

ಬೆಳ್ತಂಗಡಿ: ಮಂಗಳೂರು ನಗರ ಸಿಇಎನ್ ಅಪರಾಧ ಪೊಲೀಸ್‌ ಠಾಣೆಯಲ್ಲಿ ಜು.19ರಂದು ಕರಾವಳಿ_ಟೈಗರ್ಸ್ ನ ಇನ್ಸಾಗ್ರಾಮ್ ಪುಟದ ಪ್ರಚೋದನಕಾರಿ ಸಂದೇಶ ಪೋಸ್ಟ್ ಹಾಕಿದ ವಿರುದ್ಧ ಕಲಂ. 66(2) . 56, 353(1), 192 ಭಾರತೀಯ ನ್ಯಾಯ ಸಂಹಿತೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯು ಕರಾವಳಿ_ಟೈಗರ್ಸ್‌ ಹೆಸರಿನ ಇನ್ಸಾಗ್ರಾಮ್ ಪುಟದಲ್ಲಿ ಪ್ರಚೋದನಕಾರಿ ಸಂದೇಶಗಳನ್ನು ಪೋಸ್ಟ್ ಮಾಡುತ್ತಿದ್ದ. ಈ ಖಾತೆಯ ಬಗ್ಗೆ ಕಾರ್ಯಾಚರಣೆ ನಡೆಸಿ ಆರೋಪಿ ಬೆಳ್ತಂಗಡಿ ತಾಲೂಕಿನ ಮಲವಂತಿಗೆ ಗ್ರಾಮದ ಕಿಲ್ಲೂರು ನಿವಾಸಿ ಶರೀಫ್ ಮಗ ಮೊಹಮ್ಮದ್ ಕೈಫ್(22) ಎಂಬಾತನನ್ನು ತಮಿಳುನಾಡಿನಲ್ಲಿರುವ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿ, ತಮಿಳುನಾಡು ರಾಜ್ಯಕ್ಕೆ ತೆರಳಿ ಸೆ.18 ರಂದು ಬಂಧಿಸಿ ಮಾನ್ಯ ಮಂಗಳೂರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

LEAVE A REPLY

Please enter your comment!
Please enter your name here