ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ ನಿಂದ ನೇರಳಕಟ್ಟೆ ಸ.ಕಿ.ಪ್ರಾ. ಶಾಲೆಯಲ್ಲಿ ಶ್ರಮದಾನ

0

ಬೆಳ್ತಂಗಡಿ: ಗೆಳೆಯರ ಬಳಗ ಸೇವಾ ಸಂಸ್ಥೆ ಟ್ರಸ್ಟ್ ಆಶ್ರಯದಲ್ಲಿ ನೇರಳಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಬೃಹತ್ ಶ್ರಮದಾನ ಕಾರ್ಯಕ್ರಮ ನಡೆಯಿತು.

ಈ ಶ್ರಮದಾನದಲ್ಲಿ ಶಾಲೆಯ ಅಡುಗೆಮನೆಗೆ ವಿದ್ಯುತ್ ಸಂಪರ್ಕ ಒದಗಿಸಲಾಯಿತು, ಶಾಲೆಯ ಆವರಣ ಸ್ವಚ್ಛಗೊಳಿಸಲಾಯಿತು, ಶಾಲೆಗೆ ಹೊಸ ನಾಮಫಲಕ ಅಳವಡಿಸಲಾಯಿತು, 3 ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ತಲಾ ₹2000 ಸಹಾಯಧನ ವಿತರಿಸಲಾಯಿತು.

ಕಾರ್ಯಕ್ರಮದಲ್ಲಿ ಪಿಲಾತಬೆಟ್ಟು ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಗೆಳೆಯರ ಬಳಗದ ಗೌರವಾಧ್ಯಕ್ಷ ನೆಲ್ವಿಸ್ಟರ್ ಪಿಂಟೋ, ಗೆಳೆಯರ ಬಳಗದ ಅಧ್ಯಕ್ಷ ಡೋನ್ ಪ್ರವೀಣ್ ಕ್ರಾಸ್ತ, ಕಾರ್ಯದರ್ಶಿ ಅನಿಲ್ ಮೋರಸ್, ಸಂಚಾಲಕ ಎಲಿಯಾಸ್ ಕ್ರಾಸ್ತ, ನಿರ್ದೇಶಕರು, ಶಾಲೆಯ ಮುಖ್ಯೋಪಾಧ್ಯಾಯಿನಿ ಜ್ಯೋತಿ, ಎಸ್.ಡಿ.ಎಮ್.ಸಿ (SDMC) ಅಧ್ಯಕ್ಷ ಜಯರಾಮ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

ಪ್ರವೀಣ್ ರೊಡ್ರಿಗಸ್ ಮತ್ತು ಡಯಾನ ಅವರು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಆರ್ಥಿಕ ಸಹಾಯ ನೀಡಿದರು. ದಯಾಸಾಗರ್ ಸೌಂಡ್ ಮೂರ್ಜೆ ಮಾಲೀಕ ಕಿಶೋರ್ ರೊಡ್ರಿಗಸ್ ಅವರು ಶಾಲೆಗೆ ಅಗತ್ಯವಿರುವ ಎಲೆಕ್ಟ್ರಿಕಲ್ ವ್ಯವಸ್ಥೆಯನ್ನು ಧರ್ಮಾರ್ಥವಾಗಿ ಮಾಡುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲರಿಗೂ ಶಾಲೆಯ ಪರವಾಗಿ ಟೀ ಹಾಗೂ ಸಿಹಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು.

LEAVE A REPLY

Please enter your comment!
Please enter your name here