ವೇಣೂರು: ಪಡ್ಡಂದಡ್ಕದ ಕೆಂದ್ರ ಮಸೀದಿಯಲ್ಲಿ ವಿವಿಧ ಮೂಲಭೂತ ಸೌಲತ್ತುಗಳನ್ನು ಸೆ.12ರಂದು ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಕೆ. ಪೆರಿಂಜೆ ಅವರ ಅಧ್ಯಕ್ಷತೆ ಲೋಕಾರ್ಪಣೆ ಮಾಡಲಾಯಿತು.
ಸುಸಜ್ಜಿತವಾದ ನವೀಕೃತ ಹೌಲ್ (ವಝು ಖಾನ)ನ್ನು ತ್ವಯಿಬಾ ಎಜುಕೇಷನಲ್ ಸೆಂಟರ್ ( ಪಟ್ಟಾಡಿ ) ಮೂಡಬಿದ್ರಿ ಚೇರ್ಮೆನ್ ಸಯ್ಯದ್ ಅಬ್ದುಲ್ ರಹಿಮಾನ್ ಸಾದಾತ್ ತಂಗಳ್ ಬಾಲರವಿ ನೆರವೇರಿಸಿದರು.
ನವೀಕೃತ ಮದರಸವನ್ನು ಪ್ರಿನ್ಸಿಪಾಲ್ ದಾರುಸ್ಸಲಾಮ್ ದಾವ ಕಾಲೇಜು ಬೆಳ್ತಂಗಡಿಯ ತ್ವಾಹ ತಂಗಳ್ ನೆರವೇರಿಸಿದರು. ಮಸೀದಿ ಕಚೇರಿಯನ್ನು ಮುಂಬೈನ( ಎಂಪೈರ್ ವಿಸ್ತ ಇನ್ಫ್ರಾ )ಉದ್ಯಮಿ ಮೊಹಮ್ಮದ್ ಮುಸ್ತಫಾ ನೆರವೇರಿಸಿದರು ಮಸೀದಿ ಖತೀಬ್ ಕಲಂದರ್ ಶಾಫಿ ಬಾಖವಿ ಖಾಮಿಲ್ ಅಲ್ ಮನ್ನಾನಿ ಕರಾಯ ಕಾರ್ಯಕ್ರಮ ಉದ್ಘಾಟಿಸಿದರು.
ಮುಖ್ಯ ಅಥಿತಿಗಳಾಗಿ ಉದ್ಯಮಿ ಹಾಗು ಡಿಡಿ ಸಮೂಹ ಸಂಸ್ಥೆಗಳ ಚೇರ್ಮನ್ ಅಬ್ದುಲ್ ರಝಖ್ ಕನ್ನಡಿಕಟ್ಟೆ, ಮಸೀದಿ ಮಾಜಿ ಅಧ್ಯಕ್ಷ ಹಾಗು ಉದ್ಯಮಿ ಯು.ಕೆ. ಮೊಹಮ್ಮದ್ ಹಾಜಿ, ಮೂಡಬಿದ್ರಿ ಅಲ್ ಮಫಾಝ ಕಾಲೇಜಿನ ಪ್ರಿನ್ಸಿಪಾಲ್ ಪಿ.ಪಿ. ಅಹ್ಮದ್ ಸಖಾಫಿ, ಬೆಳ್ತಂಗಡಿ ಕೇಂದ್ರ ಲ್ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಅಕ್ಬರ್ ಬೆಳ್ತಂಗಡಿ, ಪತ್ರಕರ್ತ ಜನಾಬ್ ಎಚ್. ಮಹಮ್ಮದ್ ವೇಣೂರು ಶುಭ ಹಾರೈಸಿದರು.
ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಕಟ್ಟೆ, ಕೋಶಾಧಿಕಾರಿ ಪಿ.ಜೆ. ಮಹಮೂದ್, ಲೆಕ್ಕ ಪರಿಶೋಧಕ ಇದ್ರೀಸ್ ಪುಲಾಬೆ, ಜೊತೆ ಕಾರ್ಯದರ್ಶಿ ಅಬ್ದು ಸಲಾಂ ಕೇಶವ ನಗರ, ಸದಸ್ಯರಾದ ಅಶ್ರಫ್ ಗಾಂಧಿ ನಗರ, ಅಶ್ರಫ್ ಕಿರೋಡಿ, ಯು.ಕೆ. ಇರ್ಫಾನ್ ಪೆರಿಂಜೆ & ಶಾಂತಿ ನಗರ ಮದರಸ ಅಧ್ಯಕ್ಷ ಅಶ್ರಫ್ ಉಪಸ್ಥಿತರಿದ್ದರು.
ಪ್ರಮುಖ ದಾನಿಗಳಾದ ಸಾರ ಇಬ್ರಾಹಿಂ ಟ್ರಸ್ಟ್ ನ ಪರವಾಗಿ ಅಕ್ಬರ್ ಪೆರಿಂಜೆ, ಯು.ಕೆ. ಮೊಹಮ್ಮದ್ ಹಾಜಿ ಹಾಗೂ ಮೊಹಮ್ಮದ್ ಮುಸ್ತಫಾ ರವರನ್ನು ಗೌರವಿಸಲಾಯಿತು. ಮೊಹಮ್ಮದ್ ಶಾಫಿ ಸ್ವಾಗತಿಸಿದರು. ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ರಫೀಕ್ ಪಡ್ಡ ವಂದಿಸಿದರು.