ಉಜಿರೆ: ಶ್ರೀ ಧ.ಮಂ.ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದಿಂದ “ಈಟ್ ರೈಟ್ ಫಾರ್ ಎ ಬೆಟರ್ ಲೈಫ್” ಕಾರ್ಯಕ್ರಮ

0

ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ (ಸ್ವಾಯತ್ತ) ಸಸ್ಯಶಾಸ್ತ್ರ ವಿಭಾಗದಿಂದ ಆಯೋಜಿಸಲ್ಪಟ್ಟ “ಈಟ್ ರೈಟ್ ಫಾರ್ ಎ ಬೆಟರ್ ಲೈಫ್” ಎಂಬ ವಿಷಯದ ಕುರಿತಾದ ಜಾಗೃತಿ ಕಾರ್ಯಕ್ರಮ ಕಾಲೇಜಿನ ಸಮ್ಯಗ್ದರ್ಶನ ಸಭಾಭವನದಲ್ಲಿ ಜರುಗಿತು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾದ ಉಜಿರೆ ಎಸ್‌.ಡಿ.ಎಂ ಪ್ರಕೃತಿ ಚಿಕಿತ್ಸೆ ಮತ್ತು ಯೋಗ ವಿಜ್ಞಾನ ಕಾಲೇಜಿನ ಪೌಷ್ಟಿಕಾಂಶ ಮತ್ತು ದೈಹಿಕ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕಿ ಹಾಗೂ ಮುಖ್ಯಸ್ಥೆ ಡಾ. ಗೀತಾ ಬಿ. ಶೆಟ್ಟಿ ಅವರು ಮಾತನಾಡಿ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಆಹಾರದ ಪ್ರಾಮುಖ್ಯತೆಯನ್ನು ತಿಳಿಯಪಡಿಸಿದರು.

ಪ್ರಥಮ ಎಂ.ಡಿ. ಯ ಡಾ. ಶ್ರೇಯಾ, ಮಾನಸಿಕ ಆರೋಗ್ಯ, ಜೀವಸತ್ವಗಳು ಮತ್ತು ಅವುಗಳ ಮೂಲಗಳು, ಪೌಷ್ಟಿಕಾಂಶದ ಕೊರತೆ ಹಾಗೂ ಅದರ ನಿವಾರಣೆಯ ಬಗ್ಗೆ ಮಾತನಾಡಿದರು. ಅದೇ ರೀತಿ ಪ್ರಥಮ ಎಂ. ಡಿ. ಯ ಡಾ. ವಸಂತ್, ಆರೋಗ್ಯಕರ ಆಹಾರ ಪದ್ಧತಿ ಮತ್ತು ಸಕಾಲಿಕ ಆಹಾರ ಸೇವನೆಯ ಮಹತ್ವವನ್ನು ವಿವರಿಸಿದರು. ತೃತೀಯ ಎಂ.ಡಿ. ಯ ಡಾ. ಮೇಧಿನಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಸಸ್ಯಶಾಸ್ತ ವಿಭಾಗದ ಮುಖ್ಯಸ್ಥೆ ಶಕುಂತಲಾ ಬಿ., ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಅಭಿಲಾಷ್. ಕೆ.ಎಸ್., ಮಂಜುಶ್ರೀ ಕೆ., ಭವ್ಯ ಡಿ. ನಾಯಕ್ ಹಾಗೂ ಮೇಘ ಶಿವರಾಜ್ ಉಪಸ್ಥಿತರಿದ್ದರು. ಚಿತ್ಕಲಾ ಮತ್ತು ಬಳಗದವರು ಪ್ರಾರ್ಥನೆಗೈದರು. ತೃತೀಯ ಬಿ.ಎಸ್ಸಿ. ವಿದ್ಯಾರ್ಥಿನಿಯರಾದ ಲುಬ್ನಾ ಸ್ವಾಗತಿಸಿ, ಝಕಿಯಾ ಕಾರ್ಯಕ್ರಮವನ್ನು ನಿರೂಪಿಸಿದರು. ಮೇಘ ವಂದಿಸಿದರು.

LEAVE A REPLY

Please enter your comment!
Please enter your name here