ಉಜಿರೆಯ ದಿ ಓಶಿಯನ್ ಪರ್ಲ್ ನಲ್ಲಿ ಸೆ. 12ರಿಂದ 14ರವರೆಗೆ ಪಿ.ಎಸ್‌.ಆರ್. ಸಿಲ್ಕ್ & ಸಾರೀಸ್‌ನ ಸಾರಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ-ಸಾರಿಗಳ ಬೃಹತ್ ಸಂಗ್ರಹ ಕಂಡು ಹರಿದು ಬಂದ ತಾಲೂಕಿನ ಸಾರಿ ಪ್ರಿಯರು

0

ಬೆಳ್ತಂಗಡಿ: ಮಂಗಳೂರಿನಲ್ಲಿ ಕಳೆದ ಹಲವಾರು ವರ್ಷಗಳಿಂದ ಜವಳಿ ಉದ್ಯಮದಲ್ಲಿ ಜನರ ಮನಗೆದ್ದ ಪಿ.ಎಸ್.ಆರ್. ಸಿಲ್ಕ್ ವತಿಯಿಂದ ಉಜಿರೆಯ ನ್ಯಾಚುರೋಪತಿ ಕಾಲೇಜು ಬಳಿಯ ದಿ ಓಶಿಯನ್ ಪರ್ಲ್ ಕಾಶಿ ಪ್ಯಾಲೇಸ್‌ನಲ್ಲಿ ಪಿ.ಎಸ್‌.ಆರ್. ಸಾರಿಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ ಸೆ.12ರಂದು ಆರಂಭವಾಗಿದೆ.

ಬೃಹತ್ ಸಂಗ್ರಹವುಳ್ಳ ಈ ಸಾರಿಗಳ ಪ್ರದರ್ಶನದಲ್ಲಿ ಬೆಳಿಗ್ಗೆ 10ರಿಂದ ರಾತ್ರಿ 8 ಗಂಟೆಯ ತನಕ ಮೇಳ ನಡೆಯಲಿದೆ. ಸಾರಿಗಳ ಖರೀದಿಗಾಗಿ 400 ರೂಗಳಿಂದ ಒಂದು ಸಾವಿರ ರೂಗಳ ತನಕ ವೈವಿಧ್ಯಮಯ ಸೀರೆಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಆಕರ್ಷಕ ಡಿಸ್ಕೌಂಟ್ ಸೇಲ್ ಮೂಲಕ ಗ್ರಾಹಕರನ್ನು ಸೆಳೆಯಲು ಪ್ರದರ್ಶನ ವೇದಿಕೆ ಸಿದ್ಧವಾಗಿದೆ. ಡಿಸ್ಕೌಂಟ್ ಸಾರಿಗಳ ಪ್ರತ್ಯೇಕ ಕೌಂಟರ್ ತೆರೆಯಲಾಗಿದ್ದು. ಅತ್ಯುತ್ತಮ ಗುಣಮಟ್ಟದ ಬ್ರಾಂಡೆಡ್ ಸಿಲ್ಕ್ ಸಾರೀಸ್, ಕಾಟನ್ ಸಾರೀಸ್, ಫ್ಯಾನ್ಸಿ ಸಾರೀಸ್, ಸೆಲ್ವಾರ್ ಮೆಟೀರಿಯಲ್ಸ್ ಸೇರಿದಂತೆ ಎಲ್ಲಾ ರೀತಿಯ ವೈವಿಧ್ಯಮಯ ಸಾರಿಗಳ ಅಪೂರ್ವ ಸಂಗ್ರಹ ಇಲ್ಲಿದೆ. ಇದೀಗ ಕೆಲವೇ ತಿಂಗಳ ಅಂತರದಲ್ಲಿ ಮೂರನೇ ಬಾರಿ ನಡೆಯುತ್ತಿರುವ ಸಾರಿ ಮೇಳಕ್ಕೆ ಕಳೆದ 2 ಬಾರಿ ಗ್ರಾಹಕರಿಂದ ದೊರೆತ ಪ್ರತಿಕ್ರಿಯೆಗೂ ಹೆಚ್ಚಿನ ಪ್ರತಿಕ್ರಿಯೆ ದೊರೆಯುತ್ತಿದೆ.

ಈ ಹಿಂದೆ ಸುಳ್ಯದಲ್ಲಿ ಪಿ.ಎಸ್‌.ಆರ್. ಸಿಲ್ಕ್ ಸಾರೀಸ್ ಪ್ರದರ್ಶನ ಮತ್ತು ಮಾರಾಟ ನಡೆದ ಸಂದರ್ಭದಲ್ಲಿ ಸುಳ್ಯದ ಜನತೆಯಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಗ್ರಾಹಕರ ನಿರಂತರ ಬೇಡಿಕೆಯ ಹಿನ್ನಲೆಯಲ್ಲಿ ಮತ್ತೆ 3 ದಿನಗಳ ಸಾರಿಗಳ ಪ್ರದರ್ಶನ ಮತ್ತು ಮಾರಾಟ ಉಜಿರೆಯಲ್ಲಿ ನಡೆಯುತ್ತಿದ್ದು ಸುಂದರ ಸೀರೆಗಳ ವರ್ಣಮಯ ಸಾರಿ ಲೋಕವನ್ನು ಕಣ್ತುಂಬಿಕೊAಡು, ಖರೀದಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here