ನೆಲ್ಯಾಡಿ: ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ಮರಿಯ ಜಯಂತಿ ಆಚರಣೆ-ಮಾತೆಯರಿಂದ ವಿಶೇಷ ಪೂಜೆ

0

ನೆಲ್ಯಾಡಿ: ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ದೇವಮಾತೆ ತಾಯಿ ಮಾರಿಯಮ್ಮಳ ಜನ್ಮಾಷ್ಠಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಚರ್ಚ್ ನ ಸುಮಾರು ಮುನ್ನೂರಕ್ಕೂ ಹೆಚ್ಚು ಮಾತೆಯರು ಸಮವಸ್ತ್ರದಲ್ಲಿ ವಿಶೇಷ ಕಾಣಿಕೆಯನ್ನು ಇಟ್ಟು ಲೋಕ ಕಲ್ಯಾಣಕ್ಕಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಫಾ. ಶಾಜಿ ಮಾತ್ಯು ಧಾರ್ಮಿಕ ವಿಧಿಗಳಿಗೆ ನೇತೃತ್ವ ವಹಿಸಿದರು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸುಜಾ ಜೆಯಿಮ್ಸ್, ಟ್ರಸ್ಟಿಗಳಾದ ರೆಜಿ, ಜೋಯ್, ರಾಜೇಶ್ ಜೋನ್ಸನ್ ಕಾರ್ಯಕ್ರಮವನ್ನು ಆಯೋಜಿಸಿದರು. ಶಾಜಿ ಮುಟ್ಟೆ ತಾಯತ್ ಹರಕೆ ನೆರವೇರಿಸಿದರು.

LEAVE A REPLY

Please enter your comment!
Please enter your name here