
ಮಚ್ಚಿನ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವಾರ್ಷಿಕ ಮಹಾ ಸಭೆಯು ಸಂಘದ ಅಧ್ಯಕ್ಷ ಪದ್ಮನಾಭ ಸಾಲ್ಯಾನ್ ರವರ ಅಧ್ಯಕ್ಷತೆಯಲ್ಲಿ ಆ. 31ರಂದು ಸಂಘದ ವಠಾರ ದಲ್ಲಿ ಜರಗಿತು. ಮಚ್ಚಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು 2024 – 25ನೇ ಸಾಲಿನಲ್ಲಿ 1908 ಸದಸ್ಯರನ್ನು ಹೊಂದಿ ಸುಮಾರು ರೂ. 2,48,34,506 ಪಾಲು ಬಂಡವಾಳ ಹೊಂದಿದೆ.
ರೂ.21.49ಕೋಟಿ ಠೇವಣಿ ಹೊಂದಿರುತ್ತದೆ. ಸದಸ್ಯರ ಬೇಡಿಕೆ ಅನುಸಾರ ರೂ.26 ಕೋಟಿ ಸಾಲ ವಿತರಿಸಿ ರೂ. 75.95ಲಕ್ಷ ಲಾಭಗಳಿಸಿದೆ. ವ್ಯಾಪಾರ ವೈವಾಟಿನಲ್ಲಿ ರೂ. 742297 ಲಾಭಗಳಿಸಿದೆ. ಸದಸ್ಯರಿಗೆ ಶೇ 15%ಡಿವಿಡೆಂಡ್ ನೀಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.
ಮುಂದಿನ ಯೋಜನೆಯಾಗಿ ಸಂಘಕ್ಕೆ ನೂತನ ಕಟ್ಟಡಕ್ಕೆ ಲಿಫ್ಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉಪಾಧ್ಯಕ್ಷರಾದ ಶ್ರೀಧರ ಪೂಜಾರಿ, ನಿರ್ದೇಶಕರಾದ ಗಣೇಶ್ ಅರ್ಕಜೆ, ಮೋಹನ್ ಗೌಡ, ಸುಜಾತಾ, ರಾಜೇಶ್ ನಾಯ್ಕ್, ಬೇಬಿ, ಆನಂದ, ಚಿತ್ತರಂಜನ್ ಕೆ., ತುಂಗಪ್ಪ, ಉಮೇಶ್, ಜಯರಾಮ, ವಲಯ ಮೇಲ್ವಿಚಾರಕ ಸಿರಾಜುದ್ದೀನ್, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಯಾಗಿ ಯಕ್ಷಣ್ ವರದಿ ಲೆಕ್ಕ ಪತ್ರ ಮಂಡಿಸಿದರು. ಸಿಬ್ಬಂದಿಗಳಾದ ಗಣೇಶ್, ವನಿತಾ, ಕಿಶೋರ್, ಎಕಲತಾ ಪಿ. ಶೆಟ್ಟಿ, ಸೌಜನ್ಯ ಎನ್.ಬಿ. ಯತೀಶ್ ಕೆ. ಎಸ್., ಭವ್ಯ, ನಳಿನಿ ಸಹಕರಿಸಿದರು. ಸಂಘದ ನಿರ್ದೇಶಕ ರಾಜೇಶ್ ಸ್ವಾಗತಿಸಿದರು. ಉಪಾಧ್ಯಕ್ಷರು ಶ್ರೀಧರ ಪೂಜಾರಿ ವಂದಿಸಿದರು.