ಥ್ರೋಬಾಲ್ ಪಂದ್ಯಾಟ: ಶ್ರೀ ಭಾರತೀ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ವಿದ್ಯಾರ್ಥಿನಿಯರು ಜಿಲ್ಲಾ ಮಟ್ಟಕ್ಕೆ ಆಯ್ಕೆ

0

ಬೆಳ್ತಂಗಡಿ: ಸರಕಾರಿ ಪ್ರೌಢ ಶಾಲೆ ನಿಡ್ಲೆಯಲ್ಲಿ ಆ.26ರಂದು ನಡೆದ ಪ್ರೌಢ ಶಾಲಾ ವಿಭಾಗದ ಹುಡುಗಿಯರ ತಾಲೂಕು ಮಟ್ಟದ ಥ್ರೋಬಾಲ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆಗೊಂಡಿರುತ್ತಾರೆ.

ಸತತ 3ನೇ ವರ್ಷ ಈ ತಂಡ ಜಯಗಳಿಸಿರುವುದು ಶಾಲೆಗೂ ಹೆತ್ತವರಿಗೂ ಕೀರ್ತಿ ಹಾಗೂ ಅತ್ಯಂತ ಸಂತಸ ತಂದಿದೆ. ತಂಡದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರು ಸಹನಾ 10ನೇ ತರಗತಿ, ಕೃತಿ 10ನೇ ತರಗತಿ, ನಿಧಿ ಬಿ.10ನೇ ತರಗತಿ, ನೇಹಾ 10ನೇ ತರಗತಿ, ಫಾತಿಮಾ ಸಝನ 10ನೇ ತರಗತಿ, ಇಂಚರ 10ನೇ ತರಗತಿ, ಪವೀಕ್ಷ ರೈ 9ನೇ ತರಗತಿ, ಕನಿಷ್ಕ ಪೂಜಾರಿ 9ನೇ ತರಗತಿ, ಫಾತಿಮಾ ಅನ್ಸೀಫ 9ನೇ ತರಗತಿ, ದೀಕ್ಷಿತ 8ನೇ ತರಗತಿ, ಕಾವ್ಯಶ್ರೀ 8ನೇ ತರಗತಿ, ಸಾದ್ವಿ ಶೆಟ್ಟಿ 8ನೇ ತರಗತಿ. ಇವರಿಗೆ ದೈಹಿಕ ಶಿಕ್ಷಣ ಶಿಕ್ಷಕಿ ವಿಂಧ್ಯಾ ಅವರು ತರಬೇತಿ ನೀಡಿರುತ್ತಾರೆ.

LEAVE A REPLY

Please enter your comment!
Please enter your name here