
ಅರಸಿನಮಕ್ಕಿ: ಧರ್ಮಸ್ಥಳ ಕ್ಷೇತ್ರದ ಸಂರಕ್ಷಣೆಯ ಬಗ್ಗೆ ಪೊಸ್ಟರ್ ಹಾಕಿದ್ದಕ್ಕೆ ಮತ್ತು ಶಾಸಕ ಹರೀಶ್ ಪೂಂಜರ ಬಗ್ಗೆ ಸ್ಟೇಟಸ್ ಹಾಕಿದ್ದಕ್ಕೆ ಯುವಕನ ಮೇಲೆ ಹಲ್ಲೆ ನಡೆಸಿರುವ ಘಟನೆ ಅರಸಿನಮಕ್ಕಿಯಲ್ಲಿ ನಡೆದಿದೆ. ರಜಿತ್ ಎಂಬ ಯುವಕನ ಮೇಲೆ ಹಲ್ಲೆ ನಡೆದಿದ್ದು, ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅರಸಿನಮಕ್ಕಿಯಲ್ಲಿ ಸೆಲೂನ್ ನಲ್ಲಿ ಕೆಲಸ ಮಾಡುತ್ತಿದ್ದ ರಜಿತ್ ಮೇಲೆ ಕಿರಣ್ ಶಿಶಿಲ ಎಂಬಾತ ಆಗಸ್ಟ್ 25ರಂದು ಬೆಳಗ್ಗೆ 9.52ಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ್ದು, ಈ ಕುರಿತು ದೂರು ದಾಖಲಿಸಿದರೆ ಕೊಲೆ ಬೆದರಿಕೆ ಹಾಕಿದ್ದಾನೆ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಧರ್ಮಸ್ಥಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.