
ಬೆಳ್ತಂಗಡಿ: ಮಿತ್ತಬಾಗಿಲುನಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.27ರಂದು ಕೊಲ್ಲಿ ತಿ ದುರ್ಗಾದೇವಿ ಮುಂಭಾಗದ ಗೋಪುರದಲ್ಲಿ ನಡೆಯಲಿದೆ.
ಆ.27ರಂದು ಬೆಳಿಗ್ಗೆ ಶ್ರೀ ವಿಶ್ವೇಶ್ವರ ಮೂರ್ತಿಯ ಪ್ರತಿಷ್ಠೆ, ವಿವಿಧ ಭಜನಾ ತಂಡಗಳಿಂದ ಭಜನೆ ಕಾರ್ಯಕ್ರಮ, ಬೆಳಿಗ್ಗೆ 10.30ಕ್ಕೆ ಸಾರ್ವಜನಿಕರಿಗೆ ಆಟೋಟ ಸ್ಪರ್ಧೆ ನಡೆದು ಮಧ್ಯಾಹ್ನ ಪೂಜೆ ನಡೆಯಲಿದೆ.
ರಾತ್ರಿ 7 ಗಂಟೆಗೆ ಸಾಂಸ್ಕೃತಿಕ ವೈವಿಧ್ಯ ಕಾರ್ಯಕ್ರಮ ಸ್ಥಳೀಯರಿಂದ ನಡೆಯಲಿದೆ. ರಾತ್ರಿ 9 ಗಂಟೆಗೆ ಮಹಾಪೂಜೆ ನಡೆದು ನಂತರ ನೇತ್ರಾವತಿ ನದಿಯಲ್ಲಿ ದೇವರ ಮೂರ್ತಿ ವಿಸರ್ಜನೆ ನಡೆಯಲಿದೆ.