
ಮೊಗ್ರು: ಡಾ. ಗಂಗೂಬಾಯಿ ಹಾನಗಲ್ ಮ್ಯೂಸಿಕ್ ಮತ್ತು ಪರ್ಪಮಿಂಗ್ ಆರ್ಟ್ಸ್ ಯೂನಿವರ್ಸಿಟಿ ಸ್ಪೆಷಲ್ ಎಕ್ಸಾಮ್ ಬೋರ್ಡ್ ನಡೆಸಿದ ಜೂನಿಯರ್ ವಿಭಾಗದ ಪರೀಕ್ಷೆಯಲ್ಲಿ ಮೊಗ್ರು ಗ್ರಾಮದ ಪ್ರಜ್ವಲ್ ಪಿ.ಎನ್. ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದು ಇವರು ಉಪ್ಪಿನಂಗಡಿಯ ಗಾನ ಭಾರತಿ ಸಂಗೀತ ಶಾಲೆಯಲ್ಲಿ ಗುರುಗಳಾದ ವಿಧುಷಿ ಸ್ವರ್ಣ ಎನ್. ಭಟ್ ಬಳಿ ಸಂಗೀತ ವ್ಯಾಸಂಗ ಮಾಡುತ್ತಿದ್ದಾರೆ.
ಮೊಗ್ರು ಗ್ರಾಮದ ನೈಮಾರ್ ನಿವಾಸಿ ಪುರಂದರ ಎನ್. ಗೌಡ ಮತ್ತು ಶೋಭಾ ಪಿ.ಎನ್. ದಂಪತಿಯ ಪುತ್ರ ಶ್ರೀ ರಾಮಕುಂಜೇಶ್ವರ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.