ನೆರಿಯ: ಶ್ವೇತಾರವರ ಚಿಕಿತ್ಸೆಯ ನೆರವಿಗೆ ಮನವಿ

0

ನೆರಿಯ: ಗ್ರಾಮದ ಬಟ್ಟಾಯಿ ಪಾದೆ ನಿವಾಸಿ ಜಯಂತ ಶೆಣೈ ಮಗಳು ಶ್ವೇತಾ(24 ವರ್ಷ) ಕಳೆದ 6 ವರ್ಷಗಳಿಂದ ಹಾಸಿಗೆ ಹಿಡಿದಿದ್ದಾಳೆ. ಜಯಂತ ಶೆಣೈ ಬಯಲಂಗಡಿ ಅಂಚೆ ಇಲಾಖೆಯಲ್ಲಿ ಹಿರಿಯ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶ್ವೇತಾರಿಗೆ ಆರಂಭದಲ್ಲಿ ಕುತ್ತಿಗೆಯಿಂದ ಕೆಳಭಾಗಕ್ಕೆ ಸ್ಪರ್ಶವಿಲ್ಲದ ಕಾರಣದಿಂದ ಶರೀರವೇ ಕೆಲಸ ಮಾಡದಂತಾಗಿತ್ತು. ಆ ಸಮಯದಲ್ಲಿ ಆಸ್ಪತ್ರೆಯ ವೆಚ್ಚ ಸುಮಾರು 15ಲಕ್ಷ ದಾಟಿತ್ತು. ಹಲವು ಸಂಘಟನೆಗಳು ಹಾಗೂ ದಾನಿಗಳ ಸಹಕಾರದಿಂದ ಚಿಕಿತ್ಸೆಗಾಗಿ ಹಣ ಸಂಗ್ರಹಿಸಿ ಅವಳ ಜೀವ ಉಳಿಸಲಾಗಿತ್ತು.

ಆದರೆ ದುರದೃಷ್ಟವಶಾತ್, ಈಗ ಮತ್ತೆ ಕಾಯಿಲೆ ಉಲ್ಭಣಗೊಂಡಿದ್ದು ಸ್ಥಿತಿ ಗಂಭೀರವಾಗಿದೆ. ಪ್ರಸ್ತುತ ಕೆ.ಎಂ.ಸಿ ಆಸ್ಪತ್ರೆ ಮಂಗಳೂರಿಗೆ ದಾಖಲಾಗಿ ತುರ್ತು ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ 5 ದಿನದ ವೆಚ್ಚ 3 ಲಕ್ಷ ರೂಪಾಯಿ ದಾಟಿರುತ್ತದೆ. ಮುಂದಿನ ಚಿಕಿತ್ಸೆಗಾಗಿ ಹೆಚ್ಚಿನ ಮೊತ್ತದ ಅವಶ್ಯಕತೆ ಇದೆ. ಆದ್ದರಿಂದ ಚಿಕಿತ್ಸೆಯ ನೆರವಿಗಾಗಿ ವಿನಂತಿಸಿದ್ದಾರೆ.

ಖಾತೆ ವಿವರಗಳು: ಕರ್ನಾಟಕ ಬ್ಯಾಂಕ್

Name: SHWETHA
A/C No: 5922500100415401

IFSC CODE: KARB 0000592
NERIYA BRANCH.

LEAVE A REPLY

Please enter your comment!
Please enter your name here