ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಂಡಾಜೆ ವಲಯದ ಕಲ್ಮಂಜ ಒಕ್ಕೂಟದ ಧಾರಿಣಿ ತಂಡದ ಸದಸ್ಯೆ ಹೇಮಾವತಿ ಅವರ ಪುತ್ರ ದುರ್ಗಾಪ್ರಸಾದ್ ಅವರು ಬೈಕ್ ಅಪಘಾತದಿಂದ ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಒಟ್ಟು 4.5ಲಕ್ಷದವರೆಗೆ ಚಿಕಿತ್ಸಾ ವೆಚ್ಚ ಖರ್ಚಾಗಿದ್ದು, ಮುಂದಿನ ಚಿಕಿತ್ಸೆಗಾಗಿ ಯೋಜನೆಯಿಂದ ಮಂಜೂರಾದ ರೂ. 25000/-ಮೊತ್ತದ ಸಹಾಯ ಧನದ ಚೆಕ್ ಅನ್ನು ಫಲಾನುಭವಿಗೆ ಹಸ್ತಾಂತರಿಸಲಾಯಿತು.
ಗ್ರಾ. ಪಂಚಾಯತ್ ಸದಸ್ಯ ಶ್ರೀಧರ ಮಡಿವಾಳ ಇವರ ಕೈಯಿಂದ ಗಾಯಾಳುವಿನ ತಾಯಿ ಹೇಮಾವತಿರವರ ಇದನ್ನು ಸ್ವೀಕರಿಸಿದರು. ಜನಜಾಗೃತಿ ವೇದಿಕೆ ಸದಸ್ಯ ವಸಂತ ಮಡಿವಾಳ, ಒಕ್ಕೂಟದ ಅಧ್ಯಕ್ಷ ಬಿ.ಎನ್. ಹಮೀದ್, ಮುಂಡಾಜೆ ವಲಯದ ಮೇಲ್ವಿಚಾರಕ ಜನಾರ್ಧನ ಮಾಚಾರು, ಕಲ್ಮಂಜ ಕಾರ್ಯಕ್ಷೇತ್ರದ ಸೇವಾಪ್ರತಿನಿಧಿ ಜಿಶಾ, ಶೌರ್ಯ ವಿಪತ್ತು ತಂಡದ ಸುಧೀರ್ ಮತ್ತು ಮನೆಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.