
ಮುಂಡಾಜೆ: ಗ್ರಾಮದ ಕೊಡಂಗೆ ಸಮೀಪದ ಚಂದನ ಮಂದಿರ ನಿವಾಸಿ ಇಂದುಮತಿ ಫಡಕೆ (79ವ) ಹೃದಯಾಘಾತದಿಂದ ಆ.18ರಂದು ನಿಧನ ಹೊಂದಿದರು. ಉಜಿರೆಯಲ್ಲಿ ತನ್ನ ಮೊಮ್ಮಗಳ ಮದುವೆ ಸಮಾರಂಭದ ವೇಳೆ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು, ಲಾಯಿಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.
ಅವರಿಗೆ ಪತಿ ನಿವೃತ್ತ ಪ್ರಿನ್ಸಿಪಾಲ್ ವೀರೇಶ್ವರ ಫಡಕೆ, ಮೃತರು ಮಕ್ಕಳನ್ನು ಅಗಲಿದ್ದಾರೆ.