
ಉಜಿರೆ: ಮುಂಡತ್ತೋಡಿ ಚಾವಡಿ ಸಂತಾನ ಗೋಪಾಲಕೃಷ್ಣ ದೇವಸ್ಥಾನ ಬಾಲ ಗೋಕುಲದಲ್ಲಿ ಆ. 17ರಂದು ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು. ಮಕ್ಕಳು ರಾಧಾ ಮತ್ತು ಕೃಷ್ಣ ವೇಷ, ಭಕ್ತಿ ಗೀತೆ, ಕಥಾ ಸ್ಪರ್ಧೆ ನಡೆಯಿತು.ಪಾಲಕರು ಸುಮೇದ ಭಟ್ ಶುಭ ಹಾರೈಸಿದರು.ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತ ರಾದ ಶಾರದಾ, ಲೀಲಾವತಿ, ಬಾಲಗೋಕುಲದ ಮಾತಾಜಿಯರಾದ ಪವಿತ್ರ, ರೇವತಿ, ರಕ್ಷಿತಾ ಉಪಸ್ಥಿತರಿದ್ದರು. ಮಕ್ಕಳು, ಪೋಷಕರು, ಊರ ನಾಗರೀಕರು ಹಾಜರಿದ್ದರು.