
ಶಿಬರಾಜೆ: ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯಿಂದ ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶಿಬರಾಜೆ ಇವರ ಸಹಕಾರದೊಂದಿಗೆ ವಿವಿಧ ಕ್ರೀಡೆ, ಸಾಂಸ್ಕೃತಿಕ, ಕಾರ್ಯಕ್ರಮದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕ ಪದ್ಮಯ ಗೌಡ ಶೀoಬೂಲ್ ಉದ್ಘಾಟಿಸಿದರು.
ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಸಭಾಂಗಣ ದಲ್ಲಿ ನಡೆದ. ಉದ್ಘಾಟನಾ ಸಮಾರಂಭದಲ್ಲಿ ಗ್ರಾಮಾಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿ ಅಧ್ಯಕ್ಷ ಸಂತೋಷ್ ಜೈನ್, ಗೌರವಾಧ್ಯಕ್ಷ ಟಿ.ಎಸ್. ನಿತ್ಯಾನಂದ ರೈ, ಕಾರ್ಯದರ್ಶಿ ಧನಂಜಯ ಗೌಡ, ಜೊತೆ ಕಾರ್ಯದರ್ಶಿ ಅಕ್ಷತ್ ರೈ, ಕಳೆಂಜ ಶ್ರೀ ಸದಾಶಿವೇಶ್ವರ ದೇವಸ್ಥಾನ ಅಧ್ಯಕ್ಷ ಕೆ. ಶ್ರೀಧರ್ ರಾವ್, ಕ್ರೀಡಾ ಸಮಿತಿ ಅಧ್ಯಕ್ಷ ನಿತೇಶ್ ಬಟ್ಯಾಲ್, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಶಿಬರಾಜೆ ಪಾದೆ ಟ್ರಸ್ಟ್ ನ ಅಧ್ಯಕ್ಷ ವಿನೋದ್ ಎಸ್., ವೀರೇಂದ್ರ ಜೈನ್, ಇನ್ನಿತರ ಗಣ್ಯ ವ್ಯಕ್ತಿ ಗಳು ಉಪಸ್ಥಿತರಿದ್ದರು.