ಬೆಳ್ತಂಗಡಿ: ಬಿಜೆಪಿ ಯಲಹಂಕ ವತಿಯಿಂದ ಶಾಸಕ ಎಸ್.ಆರ್. ವಿಶ್ವನಾಥ್ ಅವರ ನೇತೃತ್ವದಲ್ಲಿ ನೆಲಮಂಗಲ ಟೋಲ್ನಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ತನಕ ನಡೆಯುವ “ಧರ್ಮಸ್ಥಳ ಚಲೋ” ಅಭಿಯಾನಕ್ಕೆ ಆ.16ರಂದು ಬೆಳಿಗ್ಗೆ ಯಲಹಂಕ-ನೆಲಮಂಗಲ-ಕುಣಿಗಲ್ಹಾಸನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಚಾಲನೆ ನೀಡಲಾಯಿತು. ಪೂಜಾ ವಿಧಿವಿಧಾನ ನೆರವೇರಿಸಿ 250ಕ್ಕೂ ಹೆಚ್ಚು ನಾಲ್ಕು ಚಕ್ರ ವಾಹನಗಳು ಮತ್ತು ನೂರಾರು ಬೈಕ್ ಗಳ ಅಭಿಯಾನವನ್ನು ಆರಂಭಿಸಲಾಯಿತು. ಅಪಪ್ರಚಾರ ಖಂಡಿಸಿ ಯಾತ್ರೆ ನಡೆಯುತ್ತಿದ್ದು, ಸಂಜೆ ಧರ್ಮಸ್ಥಳದ ಶ್ರೀ ಮಂಜುನಾಥೇಶ್ವರನ ದರ್ಶನ ಪಡೆಯಲಿದ್ದಾರೆ.
Home ಇತ್ತೀಚಿನ ಸುದ್ದಿಗಳು 250ಕ್ಕೂ ಹೆಚ್ಚು ಕಾರುಗಳಲ್ಲಿ ಧರ್ಮಸ್ಥಳದತ್ತ ಭಕ್ತ ಸಾಗರ-‘ಧರ್ಮಸ್ಥಳ ಚಲೋ’ಗೆ ನೆಲಮಂಗಲ ಸಮೀಪ ಚಾಲನೆ