
ಬೆಳ್ತಂಗಡಿ: ವರ್ತಕರ ಸಂಘ ಹಾಗೂ ಸೀನಿಯರ್ ಚೇಂಬರ್ರ್ ಇಂಟರ್ ನ್ಯಾಷನಲ್ ಸಹ ಬಾಗಿತ್ವದಲ್ಲಿ ಬೆಳ್ತಂಗಡಿ ಲೋಬೊ ಟಿವಿಎಸ್ ಷೋರೂಮ್ ಎದುರುಗಡೆ 79ನೇ ಸ್ವಾತಂತ್ರೋತ್ಸವದ ಪ್ರಯುಕ್ತ ವರ್ತಕರ ಸಂಘದ ಅಧ್ಯಕ್ಷ ರೋನಾಲ್ಡ್ ಲೋಬೊ ರವರರು ಧ್ವಜಾರೋಹಣ ಮಾಡಿದರು.
ವರ್ತಕರ ಸಂಘ ಹಾಗೂ ಮಂಜುಶ್ರೀ ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನಿಂದ ಮಾಜಿ ಯೋಧರಾದ ಸುನಿಲ್ ಶೆಣೈ, ಶಿವಕುಮಾರ್, ಸುಧೀರ್ ಶ್ಯಾನಭಾಗ್ ಹಾಗೂ ದಯಾನಂದ ಅವರಿಗೆ ಗೌರವಾರ್ಪಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ವರ್ತಕರ ಸಂಘದ ಕಾರ್ಯದರ್ಶಿ ಲಾನ್ಸಿ ಪಿರೇರ, ಉಪಾಧ್ಯಕ್ಷ ಶಶಿಧರ್ ಪೈ, ಉಪಕಾರ್ಯದರ್ಶಿ ಯಶವಂತ್ ಪತ್ವರ್ಡನ್, ಖಜಾಂಚಿ ಸುನೀಲ್ ಶೆಣೈ, ಅಲ್ಪೊನ್ಸ್ ಫ್ರಾಂಕೊ, ಜೂಡ್ ಲೋಬೊ, ಶೀತಲ್ ಜೈನ್, M.H.ಅಬೂಬಕರ್, ವಿನ್ಸoಟ್ ಡಿಸೋಜಾ, ಸೀನಿಯರ್ ಚೇಂಬರ್ ಸ್ಥಾಪಕಧ್ಯಕ್ಷ ಪ್ರಮೋದ್ ನಾಯಕ್, B. P.ಅಶೋಕ್, ಕಾರ್ಯಕಾರಿ ಸಮಿತಿ ಸದಸ್ಯರು, ಸೀನಿಯರ್ ಚೇಂಬರ್ ಸದಸ್ಯರು ಹಾಗೂ ಲೋಬೊ ಟಿವಿಎಸ್ ಹಾಗೂ ಪವರ್ ಓನ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.