ಧರ್ಮಸ್ಥಳ: ಶವ ಹೂತಿಟ್ಟ ಪ್ರಕರಣ: 13ನೇ ಗುರುತಿನ ಸ್ಥಳದಲ್ಲಿ ಜಿಪಿಆರ್ ತಂತ್ರಜ್ಞಾನ ಬಳಸಿ ಪರಿಶೀಲನೆ

0

ಧರ್ಮಸ್ಥಳ: ಗ್ರಾಮದ ಸುತ್ತಮುತ್ತಲಿನಲ್ಲಿ ಅಕ್ರಮವಾಗಿ ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಆ.11ರಂದು ಸಾಕ್ಷಿ ದೂರುದಾರ ಗುರುತಿಸಿದ್ದ 13ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸುವುದಕ್ಕೂ ಮುನ್ನ ಎಸ್‌ಐಟಿ ಅಧಿಕಾರಿಗಳು ಜಿಪಿಆರ್‌ ಯಂತ್ರ ಬಳಸಿ ಪರಿಶೀಲನೆಗೆ ಮುಂದಾಗಿದ್ದಾರೆ.

ಸ್ಥಳದಲ್ಲಿ ಅಧಿಕಾರಿಗಳ ತಂಡ ಪರಿಶೀಲನೆ ನಡೆಸುತ್ತಿದೆ. ಸಾಕ್ಷಿ ದೂರುದಾರ ಗುರುತಿಸಿದ್ದ ಈವರೆಗಿನ ಯಾವುದೇ ಸ್ಥಳದಲ್ಲಿ ಜಿಪಿಆರ್ ತಂತ್ರಜ್ಞಾನವನ್ನು ಎಸ್‌ಐಟಿ ಬಳಸಿಲ್ಲ. 13ನೇ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಲು ಮುಂದಾಗಿದ್ದಾರೆ. ಬೆಳ್ತಂಗಡಿಯಲ್ಲಿರುವ ಎಸ್‌ಐಟಿ ಕಚೇರಿಯಿಂದ ಬರುವಾಗ ಜಿಪಿಆರ್‌ ಯಂತ್ರವನ್ನು ತಂದಿದ್ದಾರೆ. ಅದರ ಫಲಿತಾಂಶದ ಆಧಾರದ ಮೇಲೆ ಉತ್ಖನನ ನಡೆಸುವುದಕ್ಕೆ ಮುಂದಾಗಲಿದ್ದಾರೆ”

LEAVE A REPLY

Please enter your comment!
Please enter your name here