
ಪದ್ಮುಂಜ: ಬೆಳ್ತಂಗಡಿಯಲ್ಲಿ ಮೀನು ವ್ಯಾಪಾರ ಮಾಡುತ್ತಿರುವ ಮುಹಮ್ಮದ್ ರವರ ಮಗಳು ಕರಾಯ ಮುಸ್ತಫಾ ಎಂಬವರ ಪತ್ನಿ ಪರಪ್ಪು ಪ್ಲಾಟ್ ನಲ್ಲಿ ವಾಸ್ತವ್ಯ ಹೊಂದಿರುವ ಖೈರುನ್ನಿಶಾ (31ವರ್ಷ) ಆರೋಗ್ಯವಾಗಿದ್ದ ಮಹಿಳೆ ರಾತ್ರಿ ಊಟ ಮಾಡಿ ಮಲಗಿದ್ದು ಬೆಳಿಗ್ಗೆ ಎದ್ದೇಳಲೇ ಇಲ್ಲ. ಕೂಡಲೇ ಉಜಿರೆ ಆಸ್ಪತ್ರೆಗೆ ಹೋದರೂ, ತಲುಪುವ ಮೊದಲೇ ಹೃದಯಘಾತದಿಂದ ಮರಣ ಹೊಂದಿರುತ್ತಾರೆಂದು ತಿಳಿದು ಬಂದಿದೆ. ಇವರು ಗಂಡ ಮುಸ್ತಫಾ ಒಂದು ಗಂಡು ಒಂದು ಹೆಣ್ಣು ಮಗಳನ್ನು ಆಗಲಿದ್ದಾರೆ.