
ನಿಡ್ಲೆ: ಆ. 6ರಂದು ಸರ್ಕಾರಿ ಪ್ರೌಢಶಾಲೆ ನಿಡ್ಲೆಯಲ್ಲಿ ಎಸ್. ಡಿ. ಎಂ ಸ್ವಾಯುತ್ತ ಕಾಲೇಜು ಉಜಿರೆಯ ಸಸ್ಯಶಾಸ್ತ್ರ ವಿಭಾಗದಿಂದ ಲ್ಯಾಬ್ ಇನ್ ಕ್ಯಾಬ್ ಕಾರ್ಯಕ್ರಮ ನಡೆಯಿತು..
ಉಪನ್ಯಾಸಕ ಅಭಿಲಾಷ್ ಅವರ ಮಾರ್ಗದರ್ಶನದಲ್ಲಿ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳಿಗೆ ಚಿಕ್ಕ ಚಿಕ್ಕ ಪ್ರಯೋಗಗಳ ಮೂಲಕ ವಿಜ್ಞಾನದ ಒಲವನ್ನು ಮೂಡಿಸಿದರು. ಶಕ್ತಿ ವಿಷಯದ ಬಗ್ಗೆ ಸ್ವಾರಸ್ಯಕರ ಮಾಹಿತಿಯನ್ನು ನೀಡಿದರು.