
ವೇಣೂರು: ಇತ್ತೀಚೆಗೆ ನಿಧನ ರಾದ ವೇಣೂರು ಮಹಾವೀರ ನಗರದ ದಿ. ಗೋಪು ಮಡಿವಾಳರ ಪತ್ನಿ ಕಮಲ ಬಂಗೇರರಿಗೆ ವೇಣೂರು ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಶ್ರದ್ದಾಂಜಲಿ ಸಭೆ ನಡೆಯಿತು.
ಶಾಸಕ ಹರೀಶ್ ಪೂಂಜ ನುಡಿನಮನ ಸಲ್ಲಿಸಿದರು.
ಕಮಲರವರ ಸ್ಮರಣಾರ್ಥ ಮಕ್ಕಳು ದೇವಸ್ಥಾನದ ಜೀರ್ಣೋದ್ದಾರಕ್ಕೆ ರೂ. 12,71,000/ ದೇಣಿಗೆಯನ್ನು ನೀಡಿದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ. ಜಯರಾಮ ಶೆಟ್ಟಿ, ಅಶೋಕ್ ಪಾಣೂರು, ಯಜ್ಞ ನಾರಾಯಣ ಭಟ್, ಜಯ ಸಾಲಿಯಾನ್ ಬಳಂಜ, ಜಾನಕಿ ನಾರಾಯಣ ಸಾಲಿಯಾನ್, ಮಾಜಿ ಅಧ್ಯಕ್ಷ ಪಿ.ಎನ್. ಪುರುಷೋತ್ತಮ ರಾವ್, ಬೆಳ್ತಂಗಡಿ ನೋಟರಿ ವಕೀಲ ಭಗೀರಥ ಜಿ. ಮೊದಲಾದ ಗಣ್ಯರು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮತ್ತು ಜೀರ್ಣೋದ್ದಾರ ಸಮಿತಿ ಸದಸ್ಯರು, ಕಮಲರವರ ಮಕ್ಕಳು, ಕುಟುಂಬ ವರ್ಗದವರು ಹಾಜರಿದ್ದರು.