


ಅರಸಿನಮಕ್ಕಿ: 38 ವರ್ಷಗಳ ಸುಧೀರ್ಘ ಸೇವೆಯ ಬಳಿಕ ಬೆಳ್ತಂಗಡಿ ತಾಲೂಕು ಬೆಳಾಲು ಗ್ರಾಮದ ಕೆ. ಸಂಜೀವರವರು ಜು. 31 2025ರಂದು ನಿವೃತ್ತಿಗೊಂಡರು. ಬೆಳ್ತಂಗಡಿ ತಾಲೂಕಿನ ಬೆಳಾಲು, ಉಜಿರೆ, ಅಳದಂಗಡಿ ಪುತ್ತೂರು ತಾಲೂಕಿನ ಉಪ್ಪಿನಂಗಡಿ ಹಾಗೂ ಕೊನೆಯದಾಗಿ ಅರಸಿನಮಕ್ಕಿ ಶಾಖೆಯಲ್ಲಿ ಸೇವೆ ಸಲ್ಲಿಸಿ ಗ್ರಾಹಕರ ಪ್ರೀತಿಗೆ ಪಾತ್ರರಾಗಿದ್ದರು.


ಬೆಳಾಲು ಗ್ರಾಮದ ಕರ್ಪುದಗುಡ್ಡೆಯ ಸೌಭಾಗ್ಯ ನಿಲಯದಲ್ಲಿ ತಾಯಿ ಬಾಗಿ, ಪತ್ನಿ ಲಲಿತಾ ಹಾಗೂ ಮಕ್ಕಳಾದ ಪ್ರಶಾಂತ್, ಪ್ರಖ್ಯಾತ್ ರೊಂದಿಗೆ ನಿವೃತ್ತಿ ಜೀವನವನ್ನು ಸುಖಕರವಾಗಿ ಸಾಗಿಸಲಿ ಎಂದು ಬ್ಯಾಂಕಿನ ಸಿಬ್ಬಂದಿಗಳು ಹಾಗೂ ಹಿತೈಷಿಗಳು ನಿವೃತ್ತಿ ಜೀವನಕ್ಕೆ ಶುಭ ಹಾರೈಸಿದ್ದಾರೆ.


            






