ಬೆಳ್ತಂಗಡಿ: ಕಪುಚಿನ್ ಕೃಷಿಕ್ ಸೇವಾ ಕೇಂದ್ರ ಮತ್ತು ವಿಮುಕ್ತಿ ಸ್ವ ಸಹಾಯ ಸಂಘಗಳ ವತಿಯಿಂದ 6ನೇ ವರ್ಷದ ವಿದ್ಯಾಸ್ನೇಹಿ ಬಡ್ಡಿ ರಹಿತ ಶಿಕ್ಷಣ ಸಾಲ ವಿತರಣಾ ಕಾರ್ಯಕ್ರಮ ಜು.20ರಂದು ವಿಮುಕ್ತಿ ಸಭಾ ಭವನದಲ್ಲಿ ನಡೆಯಿತು.
ಜ್ಯೋತಿ ಅವರು 6 ವರ್ಷಗಳ ವಿದ್ಯಾಸ್ನೇಹಿ ಪಯಣವನ್ನು ವಿವರಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಸಂಸ್ಥೆಯ ನಿರ್ದೇಶಕ ಫಾ. ವಿನೋದ್ ಮಸ್ಕರೇನಸ್ ಮಾತನಾಡಿ ಮಕ್ಕಳು ಮತ್ತು ಪೋಷಕರು ತಮ್ಮ ಜವಾಬ್ದಾರಿಯನ್ನರಿತು ಬಾಳಬೇಕು. ಶಿಕ್ಷಣದ ಜೊತೆಗೆ ಬುದ್ಧಿಮತ್ತೆಯನ್ನು ಬೆಳೆಸಿ ಸಾಮಾಜಿಕ ಕೆಡುಕುಗಳಿಂದ ದೂರವಿರುವಂತೆ ಹಿತವಚನ ನುಡಿದರು.
ಒಕ್ಕೂಟ ಅಧ್ಯಕ್ಷ ಶಾಲಿ ಅವರು ಮಾತನಾಡಿ, ಸಂಸ್ಥೆಯ ಕಾರ್ಯವೈಖರಿಯನ್ನು ಶ್ಲಾಘಿಸಿದರು.
ಒಟ್ಟು 37 ವಿದ್ಯಾರ್ಥಿಗಳಿಗೆ ಸರಿಸುಮಾರು 10ಲಕ್ಷ ಮೊತ್ತವನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕ ಫಾ. ವಿನೋದ್ ಮಸ್ಕರೇನಸ್, ಸ್ವ ಸಹಾಯ ಸಂಘಗಳ ಒಕ್ಕೂಟ ಅಧ್ಯಕ್ಷ ಶಾಲಿ ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ನಿಶ್ಮಿತಾ ಸ್ವಾಗತಿಸಿದರು. ಸವಿತಾ ಕಾರ್ಯಕ್ರಮವನ್ನು ನಿರೂಪಿಸಿ, ರೋಹಿಣಿ ವಂದನಾರ್ಪಣೆ ಸಲ್ಲಿಸಿದರು.