ಕೊಕ್ಕಡ: ಅರಣ್ಯ ಇಲಾಖೆಯಿಂದ ಆನೆ ಡ್ರೈವ್ ಕಾರ್ಯಾಚರಣೆ ಆರಂಭ-ಸ್ಥಳೀಯರು ಆದಷ್ಟು ಜಾಗೃತರಾಗಿ ಇರಬೇಕು-ಆನೆಗಳ ಬಗ್ಗೆ ಮಾಹಿತಿ ಇದ್ದಲ್ಲಿ ಡೈರೆಕ್ಟ್ ಅರಣ್ಯ ಅಧಿಕಾರಿಗಳಿಗೆ ತಿಳಿಸಬೇಕು-ಸ್ವತಃ ಕಾರ್ಯಾಚರಣೆ ಮಾಡುವಂತಿಲ್ಲ -ಇಲಾಖೆಯ ಸ್ಪಷ್ಟ ಸಂದೇಶ

0

ಕೊಕ್ಕಡ: ಸೌತಡ್ಕದಲ್ಲಿ ದಾಂದಲೆ ನಡೆಸಿ ಜೀವ ಬಳಿ ಪಡೆದಿರುವ ಆನೆಯನ್ನು ಜು. 17ರಂದು ಕಾಫಿನಬಾಗಿಲುವರೆಗೆ ಡ್ರೈವ್ ಮಾಡಿದ್ದು ಅಲ್ಲಿಂದ ಜು. 18ರಂದು ಅರಣ್ಯ ಇಲಾಖೆಯ ಅಧಿಕಾರಿಗಳು ದುಬಾರೆ ಆನೆ ಮಾವುತರನ್ನು (ನುರಿತ ಆನೆ ಡ್ರೈವರ್)ಗಳನ್ನು ಕೊಕ್ಕಡಕ್ಕೆ ಕರೆಸಿದ್ದು 4ಗಂಟೆಯಿಂದ ಆನೆ ಡ್ರೈವ್ ಕಾಪಿನ ಬಾಗಿಲುನಿಂದ ಆರಂಭವಾಗಲಿದೆ. ಆ ಸಮಯದಲ್ಲಿ ಸಾರ್ವ ಜನಿಕರು ಸ್ವತಃ ಆನೆಗಳಿಗೆ ತೊಂದರೆ ನೀಡದೆ ಮಾಹಿತಿ ಇದ್ದಲ್ಲಿ ನೇರವಾಗಿ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ ಸಹಕರಿಸಬೇಕು ಜೊತೆಗೆ ಸಾರ್ವಜನಿಕರು ಆದಷ್ಟು ಜಾಗರುಕತೆಯಿಂದ ಇರಬೇಕು.

ಇಲಾಖೆಯಿಂದ ಕ್ಷಣ ಕ್ಷಣಕ್ಕೂ ಆಯಾ ಗ್ರಾಮದಲ್ಲಿ ಜಾಗರುಕತೆ ವಿಷಯವಾಗಿ ಅನೌನ್ಸ್ ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ. ರಾತ್ರಿ ವೇಳೆ ಆನೆ ತಮ್ಮ ಜಮೀನಿಗೆ ಬಂದಿದ್ದೆ ಆದಲ್ಲಿ ಯಾರು ಲೈಟ್ ಬೆಳಕು ತೋರಿಸುವುದು, ಪಟಾಕಿ ಸಿಡಿಸುವುದು, ಆನೆಗಳಿಗೆ ತೊಂದರೆ ಯಾಗುವಂತ ಯಾವುದೇ ಕಾರ್ಯಾಚರಣೆ ಸ್ವತಃ ಮಾಡುವಂತಿಲ್ಲ ಈ ಕಾರ್ಯಾಚರಣೆ ಸ್ವತಃ ಇಲಾಖೆಯೇ ನಡೆಸುವುದು ಸಾರ್ವಜನಿಕರು ಸ್ವತಃ ತಾವಾಗೇ ಏನೂ ಮಾಡುವಂತಿಲ್ಲ ಅತರ ಏನಾದರು ಮಾಡಿ ತೊಂದರೆ ಆದರೆ ಇಲಾಖೆ ಜವಾಬ್ದಾರಿ ಆಗುವುದಿಲ್ಲ. ಎಂದು ಆರ್.ಎಫ್.ಓ ರಾಘವೇಂದ್ರ, ಎ.ಸಿ.ಎಫ್. ಸುಬ್ಬಯ್ಯ ನಾಯ್ಕ್, ಪ್ರೊಬೆಷನರಿ ಎ.ಸಿ.ಎಫ್. ಹಸ್ತ ಶೆಟ್ಟಿ ಸುದ್ದಿ ನ್ಯೂಸ್ ಗೆ ತಿಳಿಸಿದ್ದಾರೆ.

ಅರಣ್ಯ ಇಲಾಖೆಯಿಂದ ಪೊಲೀಸ್ ಇಲಾಖೆ, ಮೆಸ್ಕಾಂ ಇಲಾಖೆ, ಶಿಕ್ಷಣ ಇಲಾಖೆಗೆ ಆನೆ ಡ್ರೈವ್ ಕುರಿತು ಅರಣ್ಯ ಇಲಾಖೆ ಮಾಹಿತಿ ನೀಡಿದ್ದು, ಅಗತ್ಯವಿದ್ದಲ್ಲಿ ಸಹಕರಿಸಬೇಕೆಂದು ವಿನಂತಿಸಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here