




ಬೆಳ್ತಂಗಡಿ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಬೆಳ್ತಂಗಡಿ ಘಟಕದ ನೇತೃತ್ವದಲ್ಲಿ ಜು. 13ರಂದು ಪಯಣ ಯುವ ಮನಸುಗಳ ಸಮ್ಮಿಲನ ಕರುನಾಡ ಕಾಶ್ಮೀರ ಕೊಡಗು ಜಿಲ್ಲೆಯ ವಿವಿಧ ಪ್ರವಾಸಿ ತಾಣಗಳಿಗೆ ಭೇಟಿ ನೀಡಲಾಯಿತು.


ಬೆಳಿಗ್ಗೆ ಬೆಳ್ತಂಗಡಿಯ ಯುವವಾಹಿನಿ ಸಭಾಂಗಣದಿಂದ ಹೊರಟ ಸುಮಾರು 50 ಜನ ಸದಸ್ಯರನ್ನೊಳಗೊಂಡ ಯುವವಾಹಿನಿ ಕುಟುಂಬದ ಪಯಣ ಸುಳ್ಯದ ಚನ್ನಕೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಉಪಹಾರ ಸೇವಿಸಿ ಅಲ್ಲಿಂದ ಸೀದ ಕರುನಾಡ ಕಾಶ್ಮೀರ ಕೊಡಗು ಜಿಲ್ಲೆಯ ಅಬ್ಬಿ ಫಾಲ್ಸ್, ಕಾವೇರಿ ನಿಸರ್ಗಧಾಮ, ಗೋಲ್ಡನ್ ಟೆಂಪಲ್ ಹಾಗೂ ಹಾರಂಗಿ ಜಲಾಶಯಗಳಿಗೆ ಹೋಗಿ ಸುಂದರ ಸ್ಥಳಗಳನ್ನು ಕಣ್ತುಂಬಿಕೊಳ್ಳಲಾಯಿತು.

ಘಟಕದ ಅಧ್ಯಕ್ಷ ಗುರುರಾಜ್ ಗುರಿಪಳ್ಳ ಇವರ ನೇತೃತ್ವದಲ್ಲಿ ಸಾಗಿದ ಈ ಪಯಣದಲ್ಲಿ ಘಟಕದ ಸ್ಥಾಪಕ ಅಧ್ಯಕ್ಷ ರಾಕೇಶ್ ಕುಮಾರ್ ಮೂಡುಕೋಡಿ, ಮಾಜಿ ಅಧ್ಯಕ್ಷ ಎಂ.ಕೆ. ಪ್ರಸಾದ್, ಸದಾಶಿವ ಊರ, ಕಾರ್ಯಕ್ರಮ ಸಂಚಾಲಕ ಜಿತೇಶ್ ಬೆಳ್ತಂಗಡಿ, ಕಾರ್ಯದರ್ಶಿ ಮಧುರ ರಾಘವ್, ಕೋಶಾಧಿಕಾರಿ ನಾಗೇಶ್ ಆದೇಲು, ವೇಣೂರು ಘಟಕದ ಅಧ್ಯಕ್ಷ ಶುಭಕರ ಸಾವ್ಯ, ಕಾರ್ಯದರ್ಶಿ ರಕ್ಷಿತ್ ಅಂಡಿಂಜೆ, ಪುರುಷೋತ್ತಮ ಧರ್ಮಸ್ಥಳ, ರವೀಂದ್ರ ಬಿ. ಅಮೀನ್, ಹರೀಶ್ ಗೇರುಕಟ್ಟೆ, ಲೀಲಾವತಿ ಪಣಕಜೆ, ದಯಾನಂದ, ರತ್ನಾಕರ್, ಅರುಣ್ ಪೂಜಾರಿ, ಸತೀಶ್, ಯೋಗೀಶ್, ಅಶೋಕ್ ಹಿಪ್ಪ, ರತನ್ ಅರಳಿ, ಯುವರಾಜ್ ಮಣಿಕೆ, ವಿಥೇಶ್ ಕೋಟ್ಯಾನ್, ಅಶೋಕ್ ಕಲ್ಮಂಜ, ಗೋವಿಂದ್, ಜಯಶ್ರೀ ಕಿಲ್ಲೂರು, ರಮ್ಯಾ ವಿ. ಕೋಟ್ಯಾನ್, ಪುಷ್ಪಲತ ಧರ್ಮಸ್ಥಳ, ಶಾಂಭವಿ ಮುಂಡೂರು, ಅನಿತಾ ಮುಂಡೂರು, ವೇದಾವತಿ ಪ್ರಭಾಕರ್, ಸೌಮ್ಯ ಲಾಯಿಲ, ಅಶ್ವಿನ್ ಬಳೆಂಜ, ಶ್ರಮಿಕ್, ವಂಶಿಕ್, ಆಶಾಲತಾ, ಶೃಜನ್, ಚಂದ್ರಾವತಿ ಯೋಗೀಶ್, ಸಿಂಚನ, ಲತಾ ಪುರುಷೋತ್ತಮ, ನಿರೀಕ್ಷಾ, ಅನನ್ಯ, ಶ್ವೇತಾ ಯುವರಾಜ್, ವಂಶಿಕ, ಹಾಂಶಿಕ, ಅಮೋಘ ರಾಘವ್, ಶ್ರೀಯ, ಶ್ರುತ, ಪೃಥ್ವಿನ್, ಶೈಲೇಶ್ ಮದ್ದಡ್ಕ ಭಾಗವಹಿಸಿ ಪ್ರವಾಸದ ಸೊಬಗನ್ನು ಸವಿದರು.









