ಬೆಳ್ತಂಗಡಿ: ಲಾಯಿಲ ಶ್ರೀ ರಾಘವೇಂದ್ರ ಮಠದಲ್ಲಿ ಎಂದಿನಂತೆ ಹುಣ್ಣಿಮೆ ಪ್ರಯುಕ್ತ ನಡೆಯುವ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಜು. 10ರಂದು ಸಂಜೆ ರಾಘವೇಂದ್ರ ಬಾಂಗಿಣ್ಣಾಯ ಕುಂಟಿನಿ ಅವರ ಪೌರೋಹಿತ್ಯದಲ್ಲಿ ನಡೆಯಿತು.
ಬಳಿಕ ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪಿತಾಂಬರ ಹೇರಾಜೆ ಆ. 10ರಿಂದ 13ರವರೆಗೆ ರಾಯರ ಮಠದಲ್ಲಿ ನಡೆಯುವ 354ನೇ ಆರಾಧನಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.
ಟ್ರಸ್ಟ್ ಉಪಾಧ್ಯಕ್ಷ ಮಹಾಬಲ ಶೆಟ್ಟಿ, ಕಾರ್ಯದರ್ಶಿ ವಸಂತ ಸುವರ್ಣ, ಕೋಶಾಧಿಕಾರಿ ಶ್ರವಣ್ ರಾಜ್, ಟ್ರಸ್ಟಿಗಳಾದ ಪ್ರೊ. ಎ.ಕೃಷ್ಣಪ್ಪ ಪೂಜಾರಿ, ಸೋಮೇಗೌಡ, ಜಯರಾಮ ಬಂಗೇರ, ಸುಜಿತಾ ವಿ. ಬಂಗೇರ, ಸುಶೀಲ ಹೆಗ್ಡೆ, ಮುಖ್ಯ ಅರ್ಚಕ ರಾಘವೇಂದ್ರ ಬಾಂಗಿಣ್ಣಾಯ, ಕೃಷ್ಣ ಶೆಟ್ಟಿ, ವಿಟ್ಟಲ್ ಶೆಟ್ಟಿ, ಪದ್ಮ ಕುಮಾರ್, ಸುರೇಶ್ ಶೆಟ್ಟಿ, ಹರೀಶ್ ನಾಯ್ಕ್, ವಾರಿಜ ಸುವರ್ಣ, ಸೌಮ್ಯ ಲಾಯಿಲ, ಸವಿತಾ ಪ್ರಕಾಶ್, ಸುಜಾತ ಬಂಗೇರ, ದೀಪಕ್ ಸಿರಿ ಶಾಂಭವಿ ಬಂಗೇರ ಮತ್ತು ಭಕ್ತರು ಬಿಡುಗಡೆಗೊಳಿಸಿದರು.