ಧರ್ಮಸ್ಥಳ: ಕಳೆದ ಹತ್ತು ವರ್ಷಗಳಿಂದ ಬೈಕ್ ಕಳ್ಳತನದ ಆರೋಪಿ ಶ್ರೀಧರ ವೆಂಕಟ ಕೃಷ್ಣ ಉಪಾಧ್ಯಯ ಹೊನ್ನಾವರ ತಲೆಮರೆಸಿಕೊಂಡು ತಿರುಗಾಡುತ್ತಿದ್ದ ವ್ಯಕ್ತಿಯನ್ನು ಜು.11ರಂದು ಬೆಳ್ತಂಗಡಿ ಪೋಲಿಸ್ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ, ಉಪ ನೀರಿಕ್ಷಕ ಸಮರ್ಥ್ ಮಾರ್ಗದರ್ಶನದಲ್ಲಿ ಠಾಣಾ ಸಿಬ್ಬಂದಿ ವೃಷಭ ಮತ್ತು ಚರಣ್ ರಾಜ್ ಅವರು ಮಂಗಳೂರಿನಿಂದ ದಸ್ತಗಿರಿ ಮಾಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನ ವಿಧಿಸಿ ಮಂಗಳೂರು ಜೈಲಿಗೆ ನೀಡಿರುತ್ತಾರೆ.