ಧರ್ಮಸ್ಥಳ ಮೃತದೇಹ ಹೂತಿದ್ದೇನೆ ಎಂದ ವ್ಯಕ್ತಿ ಬೆಳ್ತಂಗಡಿ ನ್ಯಾಯಾಧೀಶರ ಮುಂದೆ- ಮುಸುಕುಧಾರಿ ವ್ಯಕ್ತಿಯನ್ನು ಕರೆತಂದ ವಕೀಲರು

0

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದಿನಿಂದ ಹಲವಾರು ಅಪರಾಧ ಕೃತ್ಯಗಳು ನಡೆದಿದ್ದು, ಅವುಗಳ ಮಾಹಿತಿ ನೀಡುತ್ತೇನೆಂದು ಪತ್ರ ಬರೆದು, ವಕೀಲರ ಮೂಲಕ ಪೊಲೀಸರನ್ನು ಸಂಪರ್ಕಿಸಿದ್ದ ವ್ಯಕ್ತಿ ಎಸ್.ಪಿ. ಹಾಗೂ ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ ನಂತರ ಇದೀಗ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಮುಸುಕುಧಾರಿಯಾಗಿ ವಕೀಲರು ವ್ಯಕ್ತಿಯನ್ನು ಬಿಗಿಪೊಲೀಸ್ ಬಂದೋಬಸ್ತ್ ನಲ್ಲಿ ಕರೆತರಲಾಗಿದೆ. ಮುಸುಕುಧಾರಿಯಾಗಿ ವಕೀಲರ ಜೊತೆ ಬಂದ ವ್ಯಕ್ತಿ ಜು.11ರಂದು ಬ್ಯಾಗ್ ಹಿಡಿದು ಒಳ ಹೋಗಿದ್ದು, ಮುಚ್ಚಿನ ಕೋರ್ಟ್ ನಲ್ಲಿ ಆತನ ಹೇಳಿಕೆ ಪಡೆಯುವ ಕಾರ್ಯವಾಗುತ್ತಿರುವುದಾಗಿ ತಿಳಿದುಬಂದಿದೆ.

LEAVE A REPLY

Please enter your comment!
Please enter your name here