ಧರ್ಮಸ್ಥಳ: ಡಿಪ್ಪೋದಿಂದ 3 ಬಸ್ಸುಗಳನ್ನು ಜು.8ರಂದು ಶಾಸಕ ಹರೀಶ್ ಪೂಂಜ ಉದ್ಘಾಟನೆ ಮಾಡಿದರು. ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ 3 ಸರಕಾರಿ ಬಸ್ಸುಗಳನ್ನು ತಾಲೂಕಿನ ನಾನಾ ಭಾಗಗಳಿಗೆ ಪ್ರಾರಂಭಿಸಲಾಗಿದೆ. 3 ಸರಕಾರಿ ಬಸ್ಸುಗಳ ಸಮಯವನ್ನು ಬೆಳಿಗ್ಗೆ 8 ಗಂಟೆಗೆ ನಿಗಧಿಪಡಿಸಲಾಗಿದೆ. ಧರ್ಮಸ್ಥಳದಿಂದ ಸೌತಡ್ಕ ಕಡೆಗೆ, ಧರ್ಮಸ್ಥಳದಿಂದ ಕೊಕ್ಕಡ, ನೆಲ್ಯಾಡಿ ಕಡೆಗೆ, ಧರ್ಮಸ್ಥಳದಿಂದ ಬೆಳಾಲು, ಬಂದಾರು, ಕುಪ್ಪೆಟ್ಟಿ, ಉಪ್ಪಿನಂಗಡಿ, ಪುತ್ತೂರು ಕಡೆಗೆ ನಿಗಧಿಪಡಿಸಲಾಗಿದೆ.
ಧರ್ಮಸ್ಥಳ ಗ್ರಾಮ ಪಂಚಾಯತ್ ಅಧ್ಯಕ್ಷೆ ವಿಮಲ, ಬಿ.ಜೆ.ಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಧರ್ಮಸ್ಥಳ, ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಧರ್ಮಸ್ಥಳ ಸಹಕಾರ ಸಂಘದ ಅಧ್ಯಕ್ಷ ಪ್ರೀತಮ್ ಡಿ. ಪ್ರಮುಖರಾದ ರತ್ಮವರ್ಮ ಜೈನ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಕೃಷ್ಣಯ್ಯ ಆಚಾರ್ಯ, ಬಿಜೆಪಿ ಬೆಳ್ತಂಗಡಿ ಮಂಡಲ ಸಾಮಾಜಿಕ ಜಾಲತಾಣ ಪ್ರಕೋಷ್ಠ ಸಹ ಸಂಚಾಲಕ ಸಂದೀಪ್ ರೈ, ಮಂಡಲ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ಗಿರೀಶ್ ಗೌಡ ಬಿ.ಕೆ. ಬಂದಾರು, ಧರ್ಮಸ್ಥಳ ಶಕ್ತಿ ಕೇಂದ್ರ ಪ್ರಮುಖ ಹರ್ಷಿತ್ ಜೈನ್, ವಿಕ್ರಮ್ ಗೌಡ, ಧರ್ಮಸ್ಥಳ ಪಂಚಾಯತ್ ಸದಸ್ಯರಾದ ದಿನೇಶ್ ರಾವ್, ರವಿ ಕುಮಾರ್, ಬಂದಾರು ಗ್ರಾಮಸ್ಥರಾದ ಶ್ರೀಧರ ಗೌಡ, ಡೊಂಬಯ್ಯ ಗೌಡ, ಪ್ರಶಾಂತ್ ಗೌಡ, ಮೋಹನ್ ಬಂಗೇರ, ಪಟ್ರಮೆ ಪಂಚಾಯತ್ ಶಕ್ತಿ ಕೇಂದ್ರ ಪ್ರಮುಖರಾದ ಡಾಗಯ್ಯ ಗೌಡ, ಪಟ್ರಮೆ ಪಂಚಾಯತ್ ಸದಸ್ಯ ರಾಜೇಶ್ ಶೆಟ್ಟಿ, ಬಿಜೆಪಿ ಪ್ರಮುಖರಾದ ಕಮಲಾಕ್ಷ, ಶರತ್, ಶ್ರೀನಿವಾಸ ಗೌಡ ಪಟ್ರಮೆ, ಹರೀಶ್ ಗೌಡ ಶಿಬರಾಜೆ, ಧರ್ಮಸ್ಥಳ ಡಿಪ್ಪೋ ಮ್ಯಾನೇಜರ್, ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.