ಉಜಿರೆ: ಸಂತ ಅಂತೋನಿ ಚರ್ಚ್ ನಲ್ಲಿ ಕಥೋಲಿಕ್ ಸಭಾದಿಂದ ವನಮಹೋತ್ಸವ ಕಾರ್ಯಕ್ರಮವು ಸುರ್ಯ ಫ್ಲೋರಿನ್ ಪಿಂಟೋ ಅವರ ಮನೆಯಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವವನ್ನು ಜು. 6ರಂದು ಆಚರಿಸಲಾಯಿತು.
ಕಥೋಲಿಕ್ ಸಭಾ ನಿರ್ದೇಶಕ ಫಾ ಅಬೆಲ್ ಲೋಬೊ ಗಿಡ ನೆಡುವ ಮೂಲಕ ಉದ್ಘಾಟನೆ ನೆರವೇರಿಸಲಾಯಿತು. ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ. ವಿಜಯ್ ಲೋಬೊ, ಪಾಲನ ಮಂಡಳಿ ಉಪಾಧ್ಯಕ್ಷ ಅಂಟೋನಿ ಫೆರ್ನಾಂಡಿಸ್, ಕಾರ್ಯದರ್ಶಿ ಲಿಗೋರಿ ವಾಸ್, ಆಯೋಗ ಸಂಚಾಲಕಿ ಲವೀನಾ ಫೆರ್ನಾಂಡಿಸ್, ಪರಿಸರ ಆಯೋಗ ಸಂಚಾಲಕ ಅಂಟೋನಿ ಡಿಸೋಜಾ, ವಾಳೆ ಗುರಿಕಾರ ಪ್ರಕಾಶ್ ಸೆರಾವೋ ಕ್ಯಾಥೋಲಿಕ್ ಸಭಾ ಆಧ್ಯಕ್ಷ ಪ್ರವೀಣ್ ಪಿಂಟೋ, ಕಾರ್ಯದರ್ಶಿ ಲಿಡಿಯ ರೋಡ್ರಿಗಸ್ ಸಂಘದ ಸದಸ್ಯರು, ವಾಳೆ ಯ ಸದಸ್ಯರು ಉಪಸ್ಥಿತರಿದ್ದರು. ರೋಶನ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಆಗಮಿಸಿದವರಿಗೆ ಗಿಡ ವಿತರಿಸಲಾಯಿತು. ಲಾರೆನ್ಸ್ ಸೋಜಾ ವಂದಿಸಿದರು.