ಮಕ್ಕಳು ಕಲಿಕೆಯಲ್ಲಿ ಶಿಸ್ತನ್ನು ಬೆಳೆಸಿಕೊಂಡು ಕಲಿತರೆ ಮಾತ್ರ ಶಿಕ್ಷಣವು ಒಲಿಯುತ್ತದೆ: ಫಾ. ಆಲ್ವಿನ್ ಸೆರಾವೋ

0

ಬೆಳ್ತಂಗಡಿ: “ಮಕ್ಕಳು ಕಲಿಕೆಯಲ್ಲಿ ಶಿಸ್ತನ್ನು ಬೆಳೆಸಿಕೊಂಡು ಕಲಿತರೆ ಮಾತ್ರ ಶಿಕ್ಷಣವು ಒಲಿಯುತ್ತದೆ. ಅವರಿಗೆ ಸಮತೋಲಿತ ಆಹಾರ, ಕಲಿಕಾ ವಾತಾವರಣವನ್ನು ಒದಗಿಸಿಕೊಡುವುದು ಪೋಷಕರ ಕರ್ತವ್ಯವಾಗಿದೆ. ಮಗುವಿನ ಕಲಿಕೆ ಸುಗಮವಾಗಿ ಸಾಗಲು ಶಿಕ್ಷಕರೊಂದಿಗೆ ಪೋಷಕರು ಕೈಜೋಡಿಸಬೇಕು” ಎಂದು ನಾರಾವಿ ಸಂತ ಆಂತೋನಿ ಕಾಲೇಜಿನ ಪ್ರಾಂಶುಪಾಲ ಗುರು ಡಾ. ಆಲ್ವಿನ್ ಸೆರಾವೋ ಅಭಿಪ್ರಾಯಪಟ್ಟರು. ಅವರು ಹೋಲಿ ರಿಡೀಮರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜೂ. 28ರಂದು ನಡೆದ ಪೋಷಕರ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ನುಡಿದರು.

“ಶಿಕ್ಷಣ ಎಂಬುದು ಸರ್ವಾಂಗೀಣ ಪ್ರಗತಿಯನ್ನು ಉಂಟು ಮಾಡುವ ಪ್ರೇರಕ ಶಕ್ತಿ. ಆದುದರಿಂದ ಮಕ್ಕಳು ಶಿಕ್ಷಣ ಪಡೆದುಕೊಂಡು ಉನ್ನತ ಸಾಧನೆಯನ್ನು ಮಾಡಿ, ಕಲಿತ ಶಾಲೆಗೂ, ಪೋಷಕರಿಗೂ ಕೀರ್ತಿ ತರುವಂತಾಗಲಿ” ಎಂದು ಗುರು ವೋಲ್ಟರ್ ಡಿಮೆಲ್ಲೋ ಅವರು ಹೇಳಿ ಆಶೀರ್ವದಿಸಿದರು.

ಶಾಲಾ ಮುಖ್ಯೋಪಾಧ್ಯಾಯ ಗುರು ಕ್ಲಿಫರ್ಡ್ ಪಿಂಟೋ ಅವರು ಈ ಶೈಕ್ಷಣಿಕ ವರ್ಷದ ಕಾರ್ಯ ಚಟುವಟಿಕೆಗಳ ಬಗ್ಗೆ ಹಾಗೂ ಯೋಜನೆಗಳ ಬಗ್ಗೆ ವಿವರವನ್ನು ಪೋಷಕರ ಮುಂದಿಟ್ಟರು. ಈ ಶಾಲಾ ಶೈಕ್ಷಣಿಕ ವರ್ಷದಲ್ಲಿ ಹೊಸದಾಗಿ ಸೇವೆಗೆ ಸೇರಿದ ಶಿಕ್ಷಕರನ್ನು ಪರಿಚಯಿಸಿ, ಶುಭ ಹಾರೈಸಿದರು.

2024 – 25ನೇ ಶೈಕ್ಷಣಿಕ ವರ್ಷದಲ್ಲಿ ನಮ್ಮ ಶಾಲೆಯು ಶೇ. 100 ಫಲಿತಾಂಶವನ್ನು ದಾಖಲಿಸಿದ್ದು, ವಿದ್ಯಾರ್ಥಿನಿ ಚೈತನ್ಯ ರೈ ಇವರು 619 ಅಂಕಗಳನ್ನು ಪಡೆದು, ರಾಜ್ಯದಲ್ಲಿ 7ನೇ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ವಿದ್ಯಾರ್ಥಿನಿಯನ್ನು ಅಭಿನಂದಿಸಿ, ಅವರ ಪೋಷಕರ ಜೊತೆ ಸನ್ಮಾನಿಸಲಾಯಿತು. ಸಹ ಶಿಕ್ಷಕಿ ಸರಿತಾ ರೋಡ್ರಿಗಸ್ ರವರು ಸಹಕರಿಸಿದರು.

ಕಳೆದ 10 ವರ್ಷಗಳಿಂದ ಶಾಲೆಯು ಸತತವಾಗಿ ಶೇ. 100 ಫಲಿತಾಂಶವನ್ನು ಪಡೆದು ಅಮೋಘ ಸಾಧನೆಯನ್ನು ಮಾಡಿದೆ. ಫಲಿತಾಂಶ ಪಡೆಯಲು ಶ್ರಮಿಸಿದ ಶಾಲಾ ಮುಖ್ಯೋಪಾಧ್ಯಾಯರು ಹಾಗೂ ಶಿಕ್ಷಕರನ್ನು ಶಾಲಾ ಸಂಚಾಲಕ ಗುರು ವೋಲ್ಟರ್ ಡಿಮೆಲ್ಲೋ ಅವರು ಪ್ರಶಂಶಿಸಿ, ಸ್ಮರಣಿಕೆಯನ್ನು ನೀಡಿ ಗೌರವಿಸಿದರು.

2024 – 25ನೇ ಶೈಕ್ಷಣಿಕ ವರ್ಷದಲ್ಲಿ ಶೇಕಡ 100 ಹಾಜರಾತಿಯನ್ನು ದಾಖಲಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ, ಅವರಿಗೆ ಶಾಲಾ ಮುಖ್ಯೋಪಾಧ್ಯಾಯ ಗುರು ಕ್ಲಿಫರ್ಡ್ ಪಿಂಟೋ ಅವರು ಬಹುಮಾನವನ್ನು ನೀಡಿ ಅಭಿನಂದಿಸಿದರು. ಸಹ ಶಿಕ್ಷಕಿ ಮೇರಿ ಸುಜಾ ಅವರು ಸಹಕರಿಸಿದರು.

2024 – 25ನೇ ಶೈಕ್ಷಣಿಕ ವರ್ಷದ ಪೋಷಕರ ಸಭೆಯ ವರದಿಯನ್ನು ಸಹ ಶಿಕ್ಷಕಿ ಎಲ್ವಿಟ ಪಾಯ್ಸ್ ಅವರು ಸಭೆಯ ಮುಂದಿಟ್ಟರು. ಸಹ ಶಿಕ್ಷಕಿ ಪಲ್ಲವಿ ಸಂಪನ್ಮೂಲ ವ್ಯಕ್ತಿಯನ್ನು ಪರಿಚಯಿಸಿದರು. ವೇದಿಕೆಯಲ್ಲಿ ಶಾಲಾ ಸಂಚಾಲಕ ಗುರು ವೋಲ್ಟರ್ ಡಿಮೆಲ್ಲೋ, ಶಾಲಾ ಮುಖ್ಯೋಪಾಧ್ಯಾಯ ಗುರು ಕ್ಲಿಫರ್ಡ್ ಪಿಂಟೋ, ಸಂಪನ್ಮೂಲ ವ್ಯಕ್ತಿಯಾದ ಗುರು ಡಾ. ಆಲ್ವಿನ್ ಸೆರಾವೋ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ರಮೇಶ್ ಹಾಗೂ ಕಾರ್ಯದರ್ಶಿ ಎಲ್ವಿಟಾ ಪಾಯ್ಸ್ ಉಪಸ್ಥಿತರಿದ್ದರು.

ಶಾಲಾ ಗೀತೆಯೊಂದಿಗೆ ಸಭೆಯು ಸಮಾಪ್ತಿಗೊಂಡಿತು. ಸಹ ಶಿಕ್ಷಕಿ ಶ್ರೀಲತಾ ಅತಿಥಿಗಳನ್ನು ಸ್ವಾಗತಿಸಿ, ಸಹ ಶಿಕ್ಷಕಿ ರೆನಿಟಾ ಲಸ್ರಾದೋ ಕಾರ್ಯಕ್ರಮವನ್ನು ನಿರೂಪಿಸಿದರು. ವಿನೀತಾ ಮೋರಸ್ ವಂದಿಸಿದರು.

LEAVE A REPLY

Please enter your comment!
Please enter your name here