ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಅರಸಿನಮಕ್ಕಿ ಗ್ರಾಮ ಪಂಚಾಯತ್ ಮುಂಬಾಗ ಬಿಜೆಪಿಯಿಂದ ಪ್ರತಿಭಟನೆ

0

ಅರಸಿನಮಕ್ಕಿ: ರಾಜ್ಯ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ಅರಸಿನಮಕ್ಕಿ ಗ್ರಾಮಪಂಚಾಯತ್ ಮುಂಬಾಗ ಜೂ. 23ರಂದು ಪ್ರತಿಭಟನೆ ನಡೆಯಿತು. 9/11 ನಿವೇಶನಗಳ ಸಮಸ್ಯೆಗಳು, ಅಕ್ರಮ ಸಕ್ರಮ ಸಮಸ್ಯೆಗಳು, ಬಡವರ ಆಶ್ರಯ ಮನೆಗಳ ಮಂಜೂರಾತಿ ಮತ್ತು ಅನುದಾನ ಬಿಡುಗಡೆ ಸಮಸ್ಯೆ ವೃದ್ಧಾಪ್ಯ ವೇತನ ಸಂಧ್ಯಾ ಸುರಕ್ಷಾ ಹಣ ಬಿಡುಗಡೆ ಸಮಸ್ಯೆ, ಬಿಪಿಎಲ್ ಕಾರ್ಡ್ ರದ್ದುಗೊಳಿಸಿದರ ಕುರಿತಾಗಿ ನಡೆದ ಪ್ರತಿಭಟನೆಯಲ್ಲಿ ಬಿಜೆಪಿ ಮುಖಂಡರಾದ ಯೋಗೀಶ್ ಆಳಂಬಿಲ, ಪ್ರಭಾಕರ ಗೌಡ ಮಲ್ಲಿಗೆ ಮಜಲು, ಶಕ್ತಿ ಕೇಂದ್ರ ಪ್ರಮುಖ್ ಜಯಪ್ರಕಾಶ್, ಪಂಚಾಯತ್ ಉಪಾಧ್ಯಕ್ಷ ಸುಧೀರ್ ಕುಮಾರ್ ಎಂ.ಎಸ್., ರಾಜು ಸಾಲಿಯಾನ್, ವೃಶಾಂಕ್ ಖಾಡಿಲ್ಕರ್, ಹಿರಿಯರು ಮುಖಂಡರುಗಳು ಕಾರ್ಯಕರ್ತರು ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯರಾಜ್ ಅವರ ಮೂಲಕ ರಾಜ್ಯಪಾಲರಿಗೆ ಪ್ರತಿಭಟನೆಯ ಮನವಿಯನ್ನು ಸಲ್ಲಿಸಲಾಯಿತು.

LEAVE A REPLY

Please enter your comment!
Please enter your name here