




ಗುರುವಾಯನಕೆರೆ: ಜೂ. 21ರಂದು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಪತಂಜಲಿ ಯೋಗ ಶಿಕ್ಷಣ ಸಮಿತಿಯ ಉಪ್ಪಿನಂಗಡಿ, ಗುರುವಾಯನಕೆರೆ ನಮ್ಮ ಮನೆ ಮತ್ತು ಪಾಂಡುರಂಗ ಶಾಖೆ ವತಿಯಿಂದ ಆಚರಿಸಲಾಯಿತು.



ಶಾಸಕ ಹರೀಶ್ ಪೂಂಜ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಯೋಗ ದಿನಾಚರಣೆಯ ಮಹತ್ವವನ್ನು ತಿಳಿಸುತ್ತಾ ಶುಭ ಕೋರಿದರು. ಯೋಗ ಬಂಧು ಸಂತೋಷ ಕಾಪಿನಡ್ಕ ಪ್ರಾಸ್ತವಿಕವಾಗಿ ಮಾತನಾಡುತ್ತಾ ಪತಂಜಲಿ ಯೋಗ ಶಿಕ್ಷಣ ಸಮಿತಿಯಿಂದ ಸಂಸ್ಕಾರ, ಸೇವೆ, ಶಿಕ್ಷಣದ ಮೂಲಕ ಯೋಗ ತರಬೇತಿಯನ್ನು ನಡೆಸುತ್ತಾ ಸಮಾಜಕ್ಕೆ ಬುನಾದಿ ಹಾಕಬೇಕಿದೆ ಎಂದು ತಿಳಿಸಿದರು.

ಯೋಗ ಬಂಧು ಪಾಂಡುರಂಗ ಶಾಖೆಯ ವಿದ್ಯಾ ನಾಯಕ್ ಅಮೃತವಚನ ವಾಚಿಸಿದರು. ಪ್ರವೀಣ್ ಪಂಚಾಂಗ ಪಠಣ ಮಾಡಿದರು. ಯೋಗ ಶಿಕ್ಷಕ ದಯಾನಂದ ಯಾದವ್ ಮಾನಸಿಕ ಸಿದ್ಧತೆ, ಉಸಿರಾಟ ಕ್ರಿಯೆ, ಗಣಪತಿ ನಮಸ್ಕಾರವನ್ನು ತಿಳಿಸಿದರು. ಜಯಶ್ರೀ ಹಾಗೂ ಲೋಕೇಶ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು. ನಮ್ಮ ಮನೆ ಶಾಖೆಯ ಯೋಗ ಶಿಕ್ಷಕ ಶಿವಣ್ಣ ಆಯುಷ್ ಪಠ್ಯಕ್ರಮದಂತೆ ಯೋಗ ತರಬೇತಿಯನ್ನು ನೀಡಿದರು. ಪ್ರಿಯ ಹಾಗೂ ವಿನಯ ಪ್ರಾತ್ಯಕ್ಷಿಕೆ, ಮಾರ್ಗದರ್ಶಕ ಪ್ರದೀಪ್ ಆಚಾರ್ಯ ಕಾರ್ಯಕ್ರಮದ ಸಮಾಪನವನ್ನು ನಡೆಸಿಕೊಟ್ಟರು. ಎಲ್ಲ ಯೋಗ ಬಂಧುಗಳು ಜೊತೆ ಸೇರಿ ಅಗ್ನಿಹೋತ್ರವನ್ನು ನಡೆಸಿದರು. ಸುಮಾರು 100ಕ್ಕೂ ಅಧಿಕ ಯೋಗ ಬಂಧುಗಳು ಭಾಗವಹಿಸಿದ್ದರು. ನಮ್ಮ ಮನೆ ಶಾಖೆಯ ಸುಮಲತಾ ಸ್ವಾಗತಿಸಿದರು.ರಾಮಚಂದ್ರ ಶೆಟ್ಟಿ ವಂದಿಸಿದರು.









