ಉಜಿರೆ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳಿಗೆ “ನಗಬೇಕು ಆಗಾಗ ಬದುಕಿನೊಳಗೆ” ವಿಶೇಷವಾದ ತರಬೇತಿ ಕಾರ್ಯಗಾರ ನಡೆಯಿತು.
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ನೆಲ್ಯಾಡಿ ಸಂತ ಜಾರ್ಜ್ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಅಂತರಾಷ್ಟ್ರೀಯ ಆರ್ಯಭಟ ಪ್ರಶಸ್ತಿ ಪುರಸ್ಕೃತ, ಕಲಾ ರತ್ನ ವಿಶ್ವನಾಥ ಶೆಟ್ಟಿ ಅವರು ತರಬೇತಿ ಕಾರ್ಯಕ್ರಮವನ್ನು ಸಂಗೀತ ಸಾಹಿತ್ಯದ ಮೂಲಕ ನಡೆಸಿಕೊಟ್ಟರು.

ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಕಾಲೇಜಿನ ಪ್ರಾಚಾರ್ಯ ಸಂತೋಷ್ ಸಲ್ಡಾನ ಮಾತನಾಡುತ್ತಾ ನಿರಂತರ ಕಾರ್ಯ ಒತ್ತಡದಿಂದಾಗಿ ನಮ್ಮ ಬದುಕಿನಲ್ಲಿ ನಗು ಮಾಯವಾಗುತ್ತಿದೆ. ಮತ್ತು ಮಾನವೀಯ ಮೌಲ್ಯಗಳು ಕಡಿಮೆಯಾಗುತ್ತಿರುವ ಈ ಸಂದರ್ಭದಲ್ಲಿ ಇಂತಹ ತರಬೇತಿಗಳು ವಿದ್ಯಾರ್ಥಿಗಳ ಬದುಕಿನಲ್ಲಿ ಪುನಶ್ಚೇತನವನ್ನು ಉಂಟುಮಾಡುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಉಪನ್ಯಾಸಕರಾದ ತಿರುಮಲೇಶ್ ರಾವ್ ಎನ್.ಕೆ., ಅನುಷಾ ಡಿ.ಜೆ., ಆದ್ಯ ಯು., ವಿದ್ಯಾರ್ಥಿ ನಾಯಕಿ ವೀಕ್ಷ ದೀಪ ಉಪಸ್ಥಿತರಿದ್ದರು. ಹಿನ್ನೆಲೆ ಸಂಗೀತ ಕೀಬೋರ್ಡ್ ನಲ್ಲಿ ಪ್ರಶಿಕ್ಷಣಾರ್ಥಿ ಸಾಯಿ ಧೃತಿ ಶೆಟ್ಟಿ ವಿ. ಸಹಕರಿಸಿದರು. ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಪ್ರಾರ್ಥಿಸಿದರು. ಪ್ರಶಿಕ್ಷಣಾರ್ಥಿ ಶ್ವೇತ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿ ವೈಷ್ಣವಿ ನಿರೂಪಿಸಿದರು. ಸ್ವಾತಿ ವಂದಿಸಿದರು.