ಕೊಕ್ಕಡ: ಎಜುನೆಕ್ಸ್ಟ್ ಅಕಾಡೆಮಿ ಕೋಚಿಂಗ್ ಕೇಂದ್ರ ಆರಂಭ:ಅನುಭವಿ ಮತ್ತು ಪ್ರತಿಭಾವಂತ ಶಿಕ್ಷಕರ ತಂಡದಿಂದ ಆರಂಭ ಗೊಂಡ ಅಕಾಡೆಮಿ

0

ಕೊಕ್ಕಡ :ಮಕ್ಕಳ ಭವಿಷ್ಯ ನಿರ್ಮಾಣದ ಮಹತ್ವದ ಗುರಿಯನ್ನು ಮನಸಿನಲ್ಲಿಟ್ಟುಕೊಂಡು ಕೊಕ್ಕಡದ ಸಮ್ಯಕ್ ಬಿಲ್ಡಿಂಗ್ ನಲ್ಲಿ ಆರಂಭಿಸಿರುವ EduNest ACADEMY ಕೋಚಿಂಗ್ ಕೇಂದ್ರವನ್ನು ಪೆರ್ಲ ಮತ್ತು ಕೊಕ್ಕಡ ಕ್ಲಸ್ಟರಿನ ಸಮೂಹ ಸಂಪನ್ಮೂಲ ವ್ಯಕ್ತಿ ವಿಲ್ಫ್ರೆಡ್ ಪಿಂಟೋರವರು ಮೇ. 25ರಂದು ದೀಪ ಬೆಳಗಿಸಿ ಉದ್ಘಾಟಿಸಿ, ತರಬೇತಿ ಕೇಂದ್ರಕ್ಕೆ ಶುಭ ಹಾರೈಸಿದರು.

ಸಂಸ್ಥೆಯಲ್ಲಿ 1ನೇ ತರಗತಿಯಿಂದ 8ನೇ ತರಗತಿಯವರೆಗೆ ಟ್ಯೂಷನ್ ತರಗತಿ ಮತ್ತು 9, 10ನೇ ತರಗತಿ ಮತ್ತು 1st PUC( Science ಮತ್ತು Commerce) ತರಗತಿಯವರಿಗೆ ಬೋಧನೆಯನ್ನು ಒದಗಿಸಲಾಗುತ್ತದೆ. ಇದರೊಟ್ಟಿಗೆ ಗಣಿತವನ್ನು ಸುಲಭ ರೀತಿಯಲ್ಲಿ ಕಲಿಯುವಂತಹ ಅಬಕಾಸ್ ತರಗತಿಯನ್ನು ನಡೆಸಲಾಗುತ್ತದೆ.

ಅನುಭವಿ ಅಧ್ಯಾಪಕರು, ವಿದ್ಯಾರ್ಥಿಗಳೊಂದಿಗೆ ವ್ಯೆಯಕ್ತಿಕ ಗಮನ, ನಡವಳಿಕೆಯ ಮಾರ್ಪಡು, ಓದುವಿಕೆ ಮತ್ತು ಬರವಣಿಗೆ ಕೌಶಲ್ಯಗಳು, ಪೋಷಕರಿಗೆ ನಿಯಮಿತವಾಗಿ ವರದಿ ಮಾಡುವುದು, ನಿಯಮಿತ ಪರೀಕ್ಷಾ ಸರಣಿಗಳು. ವಿದ್ಯಾರ್ಥಿಗಳ ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಅತ್ಯುತ್ತಮ ಸಾಧನೆ ಮಾಡಲು ಸಹಾಯ ಮಾಡುವುದು.

ಕಲಿಕೆಯ ಸುಲಭ ವಿಧಾನ, ಕಷ್ಟಪಡುತ್ತಿರುವ ವಿದ್ಯಾರ್ಥಿಗಳಿಗೆ ಸೂಕ್ತವೇದಿಕೆ ಒದಗಿಸುವುದು. ಇದರ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿಯಾಗಳು ಬೇಕಾಗುವ ತರಬೇತಿ, ಕ್ಯಾರಿಯರ್ ಗೈಡೆನ್ಸ್ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಬೇಕಾಗುವ ತರಬೇತಿಯನ್ನು ನೀಡುವುದಾಗಿ ಸಂಸ್ಥೆಯ ಸದಸ್ಯರು ಪ್ರಕಟಿಸಿದರು.

ವೇದಿಕೆಯಲ್ಲಿ ಜೆಸಿ ಸಂತೋಷ್ ಜೈನ್ ಮತ್ತು ರೇಷ್ಮಾ, ಸಂಸ್ಥೆಯ ಸದಸ್ಯೆ ಅಭಿಜ್ಞಾ, ಅಧ್ಯಾಪಕರಾದ ಶುಭ್ರ ಜೈನ್, ದೀಪಿಕಾ, ಅದೇ ರೀತಿ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಪೋಷಕರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಡಾ. ಶೋಭಾ ನಿರೂಪಿಸಿದ ಕಾರ್ಯಕ್ರಮವನ್ನು ಪ್ರೀತಿಕಾ ಪ್ರಾರ್ಥನೆ ಮಾಡಿ, ಮನೋರಮ ವಂದಿಸಿದರು.

LEAVE A REPLY

Please enter your comment!
Please enter your name here