ಕಲ್ಮಂಜ: ಗ್ರಾಮದ ಸಂಗಮ ಕ್ಷೇತ್ರ ಪಜಿರಡ್ಕ ದೇವಸ್ಥಾನದ ಮುಂಭಾಗದ ಮೆಟ್ಟಿಲನ್ನು ಪ್ರವೇಶಿಸಿದ ಮೃತ್ಯುಂಜಯ ನದಿ.
ಮೇ. 25ರಂದು ಸುರಿದ ಭಾರಿ ಮಳೆಗೆ ನೀರಿನ ಮಟ್ಟವು ಹೆಚ್ಚಾಗಿದ್ದು ಸೇತುವೆಗೆ ಅಡ್ಡಲಾಗಿ ಹಾಕಿದ್ದ ಆಣೆಕಟ್ಟು ತೆಗೆಯದೆ ಇದ್ದ ಕಾರಣ ನೀರಿನ ಮಟ್ಟ ಏರುತ್ತಿರುವುದರಿಂದ ಊರಿನ ಜನರಿಗೆ ಆತಂಕ ಸೃಷ್ಟಿಯಾಗಿದೆ.
ತಕ್ಷಣ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ದೇವಸ್ಥಾನದ ವ್ಯವಸ್ಥಾಪನ ಸಮಿತಿಯವರು ತಿಳಿಸಿದ್ದಾರೆ.