ಬೆಳ್ತಂಗಡಿ ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಇದರ ಪದಗ್ರಹಣ ಸಮಾರಂಭ, ಆಂಬುಲೆನ್ಸ್ ಲೋಕಾರ್ಪಣೆ, ಅಶಕ್ತರಿಗೆ ನೆರವು ಮತ್ತು ಸಾಧಕರಿಗೆ ಸನ್ಮಾನ

0

ಬೆಳ್ತಂಗಡಿ: ತಾಲೂಕು ಒಕ್ಕಲಿಗ ಗೌಡರ ಸೇವಾ ಟ್ರಸ್ಟ್ ಇದರ ವತಿಯಿಂದ ಪದಗ್ರಹಣ ಸಮಾರಂಭ, ಆಂಬುಲೆನ್ಸ್ ಲೋಕಾರ್ಪಣೆ, ಅಶಕ್ತರಿಗೆ ನೆರವು ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮೇ.25ರಂದು ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ನಡೆಯಿತು.
ಕಾವೂರು ಆದಿಚುಂಚನಗಿರಿ ಮಹಾ ಸಂಸ್ಥಾನ ಶಾಖಾ ಮಠದ ಶ್ರೀ ಡಾ.ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿದರು.

ದಕ್ಷಿಣ ಕನ್ನಡ ಒಕ್ಕಲಿಗ ಸೇವಾ ಸಂಘದ ಅಧ್ಯಕ್ಷ ಡಿ.ಬಿ.ಬಾಲಕೃಷ್ಣ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ, ಮಾಜಿ ಸಚಿವ ಗಂಗಾಧರ ಗೌಡ, ಬೇಗೂರು ಶ್ರೀ ನಾಗನಾಥೇಶ್ವರ ಕ್ಷೇತ್ರದ ಧರ್ಮದರ್ಶಿ ನಾರಾಯಣ ಬೇಗೂರು, ಉಜಿರೆ ಮಹಿಳಾ ಗೌಡರ ಒಕ್ಕಲಿಗರ ಅಧ್ಯಕ್ಷೆ ಅಪರ್ಣಾ ಶಿವಕಾಂತ್ ಗೌಡ, ಉದ್ಯಮಿ ಕಿರಣ್ ಚಂದ್ರ ಪುಷ್ಪಗಿರಿ, ಕಡಬ ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಸ್ಥಾಪಕಾಧ್ಯಕ್ಷ ಸುರೇಶ್ ಗೌಡ ಬೈಲು, ಮಂಗಳೂರು ಒಕ್ಕಲಿಗರ ಯಾನೆ ಗೌಡರ ಸೇವಾ ಸಂಘದ ಯುವ ಘಟಕದ ಅಧ್ಯಕ್ಷ ಕಿರಣ್ ಕುಮಾರ್ ಬಡ್ಲೆಗುತ್ತು, ಬೆಳ್ತಂಗಡಿ ಸ್ವಾಮಿ ಪ್ರಸಾದ್ ಕನ್ ಸ್ಟ್ರಕ್ಷನ್ ಮಾಲಕ ಕೆ. ಎಂ.ನಾಗೇಶ್ ಕುಮಾರ್ ಗೌಡ, ಪುತ್ತೂರು ಗೌಡರ ಯಾನೆ ಒಕ್ಕಲಿಗರ ಸೇವಾ ಸಂಘದ ಅಧ್ಯಕ್ಷ ರವಿ ಗೌಡ ಮುಂಗ್ಲಿ ಮನೆ, ಬೆಳ್ತಂಗಡಿ ತಾಲೂಕು ಒಕ್ಕಲಿಗರ ಗೌಡರ ಸೇವಾ ಸಂಘದ ಅಧ್ಯಕ್ಷ ಬಾಲಕೃಷ್ಣ ಗೌಡ ಕೇರಿಮಾರು ಉಪಸ್ಥಿತರಿದ್ದರು‌.

ಟ್ರಸ್ಟ್ ಗೌರವಾಧ್ಯಕ್ಷ ರಂಜನ್ ಜಿ.ಗೌಡ, ಕೆ.ವಿಜಯ ಗೌಡ ವೇಣೂರು, ಕಾರ್ಯಾಧ್ಯಕ್ಷ ಶ್ರೀನಿವಾಸ ಗೌಡ ಬೆಳಾಲು, ಕೆ.ಜಯಂತ ಗೌಡ ಗುರಿಪಳ್ಳ, ಕಾರ್ಯದರ್ಶಿ ಭರತ್ ಗೌಡ ಬಂಗಾಡಿ ಸಹಕರಿಸಿದರು.

ಬೆಳಾಲು ಗ್ರಾಮ ಪಂಚಾಯತ್ ಅಧ್ಯಕ್ಷ ವಿದ್ಯಾ ಶ್ರೀನಿವಾಸ್ ಪ್ರಾರ್ಥನೆ ಮಾಡಿದರು, ಟ್ರಸ್ಟ್ ಅಧ್ಯಕ್ಷ ಮೋಹನ್ ಗೌಡ ಕಲ್ಮಂಜ ಸ್ವಾಗತಿಸಿ, ಟ್ರಸ್ಟ್ ಕೋಶಾಧಿಕಾರಿ ಸೂರಬ್ ವಳಂಬ್ರ ವಂದಿಸಿದರು.

LEAVE A REPLY

Please enter your comment!
Please enter your name here