ಕೊಕ್ಕಡ: ಗ್ರಾಮದ ಕೊಡಿoಗೇರಿ ಗಂಗಯ್ಯ ಗೌಡರವರು (90 ವರ್ಷ) ಮೇ. 16ರಂದು ದೈವಾದಿನರಾಗಿದ್ದಾರೆ. ಇವರು ಪಟೇಲರ ಆಡಳಿತ ಸಂಧರ್ಭದಲ್ಲಿ ಉಗ್ರಾಣಿಯಾಗಿ ಸುಮಾರು 10 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು.
ಕೊಡಿoಗೇರಿ ಸಮೀಪ ಸೇತುವೆಗಾಗಿ ಸುಮಾರು 40 ವರ್ಷಗಳಿಂದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದರು.. ಇತ್ತೀಚೆಗೆ ಕೊಡಿoಗೇರಿ ಸೇತುವೆ ಲೋಕಾರ್ಪಣೆಗೊಂಡಾಗ ಸಂತಸಗೊಂಡಿದ್ದರು.. ಇವರು ಓರ್ವ ಪುತ್ರ ಬಾಲಕೃಷ್ಣ ಹಾಗೂ ಮೂವರು ಪುತ್ರಿಯರು ಹಾಗೂ ಸೊಸೆ ಮೊಮ್ಮಕ್ಕಳು ಕುಟುಂಬಸ್ಥರನ್ನು ಅಗಲಿದ್ದಾರೆ.