ಧರ್ಮಸ್ಥಳ: ವಿಶ್ವದ ಕೋಟ್ಯಾಂತರ ಭಕ್ತರ ಶ್ರದ್ಧಾಕೇಂದ್ರ ಶ್ರೀರಾಮ ಜನ್ಮ ಭೂಮಿ ಅಯೋಧ್ಯೆಯಲ್ಲಿ ಅತಿ ಸುಂದರವಾದ ದೇಗುಲ ನಿರ್ಮಾಣವಾಗಿ ಲೋಕಾರ್ಪಣೆಗೊಂಡಿರುವುದು ಇಡೀ ಜಗತ್ತಿಗೆ ಸಂತೋಷವನ್ನುಂಟುಮಾಡಿದೆ. ಇಂತಹ ಪುಣ್ಯಕ್ಷೇತ್ರದ ಪಕ್ಕದಲ್ಲಿ ದಕ್ಷಿಣದ ಅಯೋಧ್ಯೆಯೆಂದು ಖ್ಯಾತಿ ಹೊಂದಿದ ಕನ್ಯಾಡಿ ಶ್ರೀ ರಾಮ ಕ್ಷೇತ್ರ ಮಹಾಸಂಸ್ಥಾನಮ್ ಇದರ ಶಾಖಾ ಮಠಕ್ಕೆ ಮೇ. 19ರಂದು ಭೂಮಿ ಪೂಜೆ ನಡೆಯಲಿದೆ ಎಂದು ಶ್ರೀ ಜಗದ್ಗುರು ಪೀಠದ ಪೀಠಾಧೀಶ ಮಹಾಮಂಡಲೇಶ್ವರ 1008 ಸ್ವಾಮಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಮಹಾರಾಜ ಹೇಳಿದರು. ಅವರು ಮೇ. 9ರಂದು ಕನ್ಯಾಡಿ ಶ್ರೀ ರಾಮ ಕ್ಷೇತ್ರದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕ್ಷೇತ್ರದ ನಿರ್ಮಾತೃರು ಜಗದ್ಗುರು ಶ್ರೀ ಆತ್ಮಾನಂದ ಸರಸ್ವತಿ ಸ್ವಾಮೀಜಿಯವರ ಸಂಕಲ್ಪದಂತೆ 9 ಕಡೆ ಶಾಖಾ ಮಠಗಳ ನಿರ್ಮಾಣ ನಡೆಯುತ್ತಿದ್ದು ಈಗಾಗಲೇ ಉಡುಪಿ, ಹೊನ್ನಾವರ, ಭಟ್ಕಳ ಕರಿಕಲ್, ದೇವಭೂಮಿ ಹರಿದ್ವಾರದಲ್ಲಿ ಶಾಖಾ ಮಠ ಹೊಂದಿದೆ.
ಅಯೋದ್ಯೆ ಶಾಖಾ ಮಠಕ್ಕೆ ಜಾಗವನ್ನು ಖರೀದಿ ಮಾಡಿದ್ದು ಈ ಜಾಗದಲ್ಲಿ ಮೇ. 19ರಂದು ಬೆಳಗ್ಗಿನ 10ಗಂಟೆಯ ಸುಮೂಹೂರ್ತದಲ್ಲಿ ಶಾಖಾ ಮಠದ ಶಿಲಾನ್ಯಾಸ, ಭೂಮಿ ಪೂಜೆಯನ್ನು ನಡೆಯಲಿದೆ. 35 ಸಾವಿರ ಚದರ ಅಡಿಯ 4 ಮಹಡಿಯ ಕಟ್ಟಡದಲ್ಲಿ ರಾಮ ಮಂದಿರ, 700 ಜನರಿಗೆ ಬೇಕಾಗುವ ಧ್ಯಾನ ಮಂದಿರ, 40 ಕೊಠಡಿಯನ್ನು ಹೊಂದಿ ದಂತೆ ಮಂದಿರ ಅಯೋಧ್ಯೆಯ ಅಂಕ್ವಾರ ಭರತ್ ಕುಂಡ ರಸ್ತೆಯಲ್ಲಿ ನಿರ್ಮಾಣ ಆಗಲಿದೆ.

ಈ ಭೂಮಿ ಪೂಜೆಯಲ್ಲಿ ಅನೇಕ ವಿಭೂತಿ ಪುರುಷರು ರಾಷ್ಟ್ರ ಮಟ್ಟದ ರಾಜ್ಯಮಟ್ಟದ ನೇತಾರರು ಭಾಗವಹಿಸಲಿದ್ದಾರೆ ಎಂದರು. ಈ ಕಾರ್ಯಕ್ರಮದಲ್ಲಿ ಆಚಾರ್ಯ ಮಾಹಾಮಂಡಲೇಶ್ವರ 1008 ಅವದೇಶಾನಂದ ಗಿರಿಜೀ ಮಹಾರಾಜ್, ಪಂಚದಶನಾಮ್, ಜುಣಾ ಅಖಾಡ, ಶ್ರೀ ಮಹಂತ್ ವಿದ್ಯಾನಂದ ಸರಸ್ವತಿಜೀ ಮಹಾರಾಜ್, ಅಂತರಾಷ್ಟ್ರೀಯ ಉಪಾಧ್ಯಕ್ಷ, ಶ್ರೀ ಪಂಚದಶನಾಮ್ ಜುನಾ ಅಖಾಡ,. ಶ್ರೀ ಮಹಂತ್ ಡಾ|.ಸ್ವಾಮಿ ಭರತ್ ದಾಸ್‌ಜೀ ಮಹಾರಾಜ್, ಉದಾಸೀನ್ ಸಂಘತ್ ಋಷಿ ಆಶ್ರಮ್, ರಾಣೋಪಾಲಿ, ಅಯೋಧ್ಯೆ ರಾಮ ಜನ್ಮ ಭೂಮಿ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್,. ಶ್ರೀ ಮಹಂತ್ ದೇವಾನಂದ್ ಸರಸ್ವತಿಜೀ ಮಹಾರಾಜ್, ಸಚಿವ ಶ್ರೀ ಪಂಚದಶನಾಮ್, ಜುನಾ ಆಖಾಡ, ಹರಿದ್ವಾರ ಶ್ರೀ ಮಹಂತ್ ಸುರೇಶ್ ದಾಸ್‌ಜೀ ಮಹಾರಾಜ್, ದಿಗಂಬರ ಅಖಾಡ, ಅಯೋಧ್ಯೆ,. ಶ್ರೀ ಮಹಂತ್ ಕಮಲನಯನ್ ದಾಸ್‌ಜೀ ಮಹಾರಾಜ್, ಚೋಟಿ ಚಾವಣಿ, ಅಯೋಧ್ಯೆ., ಶ್ರೀ ಮಹಂತ್ ಅವದೇಶ್ ದಾಸ್ ಜಿ ಮಹಾರಾಜ್ ಬಡಾಭಕ್ತ ಮಹಲ್ ಅಯೋದ್ಯಾ ಧಾಮ್, ಶ್ರೀ ಮಹಂತ್ ರಾಜ್ ಕುಮಾರ್ ದಾಸ್ ಜೇ ಮಹಾರಾಜ್ ರಾಮವಲ್ಲಭ ಕುಂಜ, ಶ್ರೀ ಮಹಂತ್ ಸಂಜಯ್ ದಾಸ್ ಜೇ ಮಹಾರಾಜ್ ಹನುಮಾನ್ ಗಡಿ, ಶ್ರೀ ಮಹಂತ್ ರಾಜೂ ದಾಸ್ ಜೇ ಮಹಾ ರಾಜ್ ಹನುಮಾನ್ ಗಡಿ ಉಪಸ್ಥಿತರಿರುವರು.
ಮುಖ್ಯ ಅತಿಥಿಗಳಾಗಿ ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಬಿ. ಎಲ್. ಸಂತೋಷ್, ಕರ್ನಾಟಕ ಸರಕಾರದ ಉಪ ಮುಖ್ಯ ಮಂತ್ರಿ ಡಿ. ಕೆ. ಶಿವ ಕುಮಾರ್, ರಾಷ್ಟೀಯ ಸ್ವಯಂ ಸೇವಾ ಸಂಘದ ಸಂಯುಕ್ತ ಮಹಾ ಸಚಿವ ಮುಕುಂದ್ ಜಿ, ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ,ಸಚಿವರಾದ ಮಾಂಕಾಳ್ ಎಸ್. ಸಿ. ವೈದ್ಯ, ಮಧು ಬಂಗಾರಪ್ಪ ಅಯೋದ್ಯೆ ನಗರ ಶಾಸಕ ವೇದ ಪ್ರಕಾಶ್ ಗುಪ್ತ ಅಯೋದ್ಯೆ ಸಂಸದ ಅವದೇಶ್ ಪ್ರಸಾದ್, ಮಾಜಿ ಸಂಸದ ಲಲ್ಲೂ ಸಿಂಹ, ಅಯೋದ್ಯೆ ಗೋಸಾಹಿ ಗಂಜಿ ಶಾಸಕ ಅಭಯ್ ಸಿಂಹ, ಮಾಜಿ ಸಚಿವ ಕಾರ್ಕಳ ಶಾಸಕ ಸುನೀಲ್ ಕುಮಾರ್, ಮಂಗಳೂರು ಸಂಸದ ಬ್ರೆಜೇಶ್ ಚೌಟ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, ಹರಿದ್ವಾರ ಶಾಸಕ ಮದನ್ ಕೌಶಿಕ್, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್, ಶಿರಸಿ ಶಾಸಕ ಭೀಮಣ್ಣ, ಅಯೋದ್ಯೆ ಜಿ. ಪ. ಅಧ್ಯಕ್ಷೆ ರೋಲಿ ಸಿಂಹ, ಅಯೋದ್ಯಾ ಧಾಮ್ ಮೇಯರ್ ಮಹಂತ್ ಗಿರೀಶ್ಪತಿ, ಅಯೋದ್ಯೆ ಬಿಜೆಪಿ ಜಿಲ್ಲಾ ಅಧ್ಯಕ್ಷ ಸಂಜೀವ ಸಿಂಹ, ಮಂಗಳೂರು ಕುದ್ರೋಳಿ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್, ಅಯೋದ್ಯೆ ಜಿ. ಪ. ಸದಸ್ಯ ದೇವತಾ ಪ್ರಸಾದ್ ಪಟೇಲ್, ಅಯೋದ್ಯೆ ಬ್ಲಾಕ್ ಪ್ರಮುಖ್ ಶಿವೇಂದ್ರ ಸಿಂಹ, ಅಯೋದ್ಯೆ ಅಂಕ್ವಾರ ಪಂಚಾಯತ್ ಅಧ್ಯಕ್ಷ ರಾಜೇಶ್ ಮೌರ್ಯ, ಅಯೋದ್ಯೆ ಬಿಜೆಪಿ ವರಿಷ್ಟ ರಾಮ ಜನಮ್ ವರ್ಮ, ಮೋಹಸಿಂಪುರ್ ಅಮಿತ್ ಕುಮಾರ್ ಸಿಂಹ, ಅಯೋದ್ಯೆ ದ್ವಾರಿಕಾ ಪ್ರಸಾದ್ ದುಬ್ ಮೊದಲದವರು ಭಾಗವಹಿಸಲಿದ್ದಾರೆ. ಬೆಳ್ತಂಗಡಿ, ಭಟ್ಕಳ, ಉತ್ತರ ಕನ್ನಡ ಸೇರಿದಂತೆ ರಾಜ್ಯದಿಂದ ಹಲವಾರು ಮಂದಿ ಭಾಗವಹಿಸಲಿದ್ದಾರೆ ಎಂದು ಸ್ವಾಮೀಜಿ ಹೇಳಿದರು. ಟ್ರಷ್ಟಿ ತುಕಾರಾಮ ಸಾಲಿಯಾನ್ ಸ್ವಾಗತಿಸಿದರು.