ಗುರುವಾಯನಕೆರೆ: ಉಗ್ರರ ವಿರುದ್ಧ ಸೇನೆಯ ಆಪರೇಷನ್ ಸಿಂದೂರದ ಬಗ್ಗೆ ಬೆಳ್ತಂಗಡಿ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಹರ್ಷವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಶಶಿರಾಜ್ ಶೆಟ್ಟಿ “ಆಪರೇಷನ್ ಸಿಂಧೂರ ದಾಳಿ ಅತ್ಯುತ್ತಮ ಕಾರ್ಯ”.
ಪೆಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿ 26 ಜನರನ್ನ ಹತ್ಯೆ ಮಾಡಿದ ಪಾಕಿಸ್ತಾನದ ಉಗ್ರರ ಮೇಲೆ ಭಾರತೀಯ ಸೈನಿಕರು ಏರ್ ಸ್ಟ್ರೈಕ್ ಮಾಡಿದ್ದಾರೆ. ಉಗ್ರರ ಅಡಗುತಾಣಗಳನ್ನು ದ್ವಂಸ ಮಾಡಿ ಮೋದಿ ಸರ್ಕಾರ ಅವರನ್ನು ಬಲಿಪಡೆದುಕೊಂಡಿದೆ.
ದೇಶದ ಜನತೆ ಬಯಸಿದ ಕೆಲಸವನ್ನು ಮೋದಿ ಸರ್ಕಾರ ಮಾಡಿದೆ. ಪೆಹಲ್ಗಾಮ್ ನಲ್ಲಿ ಮಹಿಳೆಯರ ಸಿಂಧೂರ ಅಳಿಸಿದ ಉಗ್ರರನ್ನು ಆಪರೇಷನ್ ಸಿಂಧೂರ ಮೂಲಕ ಪ್ರತಿದಾಳಿ ನಡೆಸಿದ್ದು ಉತ್ತಮ ಕೆಲಸ. ಈ ಮೂಲಕ ದೇಶದ ನಾಗರಿಕರಿಗೆ ಕೇಂದ್ರ ಸರ್ಕಾರ ಭದ್ರತೆ ಒದಗಿಸಿದೆ. ಅಲ್ಲದೇ, ದೇಶದ ಮೇಲೆ ದಾಳಿಯಾದಾಗ ಯಾವುದೇ ಕಾರಣಕ್ಕೂ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಅಂತ ಸಾಬೀತು ಮಾಡಿದೆ” ಎಂದರು.