
ಉಜಿರೆ: ಏ.30ರಂದು ಸುರಿದ ಭಾರೀ ಗಾಳಿ ಮಳೆಗೆ ಉಜಿರೆ ಧರ್ಮಸ್ಥಳ ಹೆದ್ದಾರಿ ಬದಿಯ ಮರವೊಂದು ರಸ್ತೆಯಲ್ಲಿ ಸಂಚರಿಸುತ್ತಿದ್ದ ಬೈಕ್ ಮೇಲೆ ಬಿದ್ದು ಅದೃಷ್ಟವಶಾತ್ ಸವಾರ ಅಪಾಯದಿಂದ ಪಾರಾದ ಬೆನ್ನಲ್ಲೇ ಉಜಿರೆ ಗ್ರಾಮ ಪಂಚಾಯತ್ ಅಪಾಯಕಾರಿ ಮರಗಳ ಗೆಲ್ಲು ತೆರವುಗೊಳಿಸುವ ಕೆಲಸ ಪೂರ್ಣಗೊಳಿಸಿದೆ. ವಾಹನ ದಟ್ಟಣೆಯಿಂದ ಟ್ರಾಫಿಕ್ ಜಾಮ್ ಉಂಟಾಗಿತ್ತು. ತಕ್ಷಣ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಉಷಾ ಕಿರಣ್, ಧನ್ವಿ ಆಂಬುಲೆನ್ಸ್ ಮಾಲಕ, ಶೌರ್ಯ ವಿಪತ್ತು ತಂಡ ಪೋಲಿಸ್ ಇಲಾಖೆ ಹಾಗೂ ಸಾರ್ವಜನಿಕರು ಸೇರಿ ತೆರವು ಕಾರ್ಯಾಚರಣೆ ನಡೆಸಿದರು.