400ರಲ್ಲಿ 399 ಅಂಕ ಪಡೆದ ವಿದ್ಯಾರ್ಥಿನಿ ಫಾತಿಮ ರಝ್ನೀನಾ

0

ಬೆಳ್ತಂಗಡಿ: ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ನಡೆಸಿದ 2024-2025ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ 10ನೇ ತರಗತಿಯಲ್ಲಿ ಎಲ್ಲಾ 3 ವಿಷಯಗಳ ಲಿಖಿತ ಪರೀಕ್ಷೆಯಲ್ಲಿ 100ಕ್ಕೆ 100 ಅಂಕಗಳನ್ನು ಪಡೆದು ಹಾಗೂ ಪ್ರಾಕ್ಟಿಕಲ್ ವಿಷಯದಲ್ಲಿ 99 ಅಂಕವನ್ನು ಗಳಿಸಿ ಒಟ್ಟು 400ರಲ್ಲಿ 399 ಅಂಕ ಪಡೆದಿರುವ ಉಜಿರೆಯ ಫಾತಿಮ ರಝ್ನೀನಾ ಸಾಧನೆ ಮಾಡಿದ್ದಾಳೆ. ಈ ಮೂಲಕ ಮದರಸ ಹಾಗೂ ಊರಿಗೆ ಕೀರ್ತಿ ತಂದಿದ್ದಾರೆ.

ಸತತವಾಗಿ 10 ವರ್ಷಗಳಿಂದಲೂ ಮದರಸದ ಯಾವುದೇ ತರಗತಿಗೆ ಗೈರುಹಾಜರಾಗದೆ ಇರವುದು ಈ ಬಾಲಕಿಯ ಮತ್ತೊಂದು ವಿಶೇಷತೆ. ಮೊಹ್ಯಿದ್ದೀನ್ ಜುಮಾ ಮಸೀದಿ ಹಳೆಪೇಟೆ ಉಜಿರೆ ಇದರ ಅಂಗಸಂಸ್ಥೆಯಾದ ಅಲ್- ಬದ್ರಿಯಾ ಅರೇಬಿಕ್ ಮದ್ರಸ ಗಾಂಧಿನಗರದ ವಿದ್ಯಾರ್ಥಿನಿಯಾಗಿರುವ ಫಾತಿಮ ರಝ್ನೀನಾ ಉಜಿರೆ ರೇಂಜ್ ಮಟ್ಟದಲ್ಲಿ ಪ್ರಥಮ ಸ್ಥಾನಿಯಾಗಿದ್ದಾಳೆ.

ಈಕೆ ಉಜಿರೆ ಗಾಂಧಿನಗರದ ಹಾಜಿ ಮುಹಮ್ಮದ್ ರಫೀಕ್ ಹಾಗೂ ಸೈಯ್ಯಿದತ್ ಆಯಿಷತ್ ಬೀವಿ ದಂಪತಿಯ ಪುತ್ರಿ. ಕರ್ನಾಟಕ ಮುಸ್ಲಿಂ ಜಮಾಅತ್ ಬೆಳ್ತಂಗಡಿ ಝೋನ್ ಅಧ್ಯಕ್ಷ ಸೈಯ್ಯದ್ ಮುಹಮ್ಮದ್ ಕೋಯ ತಂಙಳ್ ರವರ ಮೊಮ್ಮಗಳಾಗಿದ್ದಾಳೆ. ಸ್ಥಳೀಯ ಮಸೀದಿ ಖತೀಬರದ ಹಾಫಿಳ್ ಬಾಸಿತ್ ಹಿಮಾಮಿ ಉಸ್ತಾದ್ ರವರು ಉತ್ತಮ ಮಾರ್ಗದರ್ಶನ ನೀಡಿದರು.

LEAVE A REPLY

Please enter your comment!
Please enter your name here