
ಬರೆಂಗಾಯ: ಪುರುಷರ ಪೂಜೆ ನಿಡ್ಲೆ ಗ್ರಾಮದ ಬರೆಂಗಾಯ ದರ್ಕಾಸು ವೆಂಕಪ್ಪ ಗೌಡರ ಮನೆಯಲ್ಲಿ ಎ.16ರಂದು ನಡೆಯಿತು. ಎ 8ರಂದು ಪುರುಷರ ವೇಷಧಾರಿಗಳು ಮನೆ ಮನೆ ತಿರುಗಾಟ ಮಾಡಿ ಎ. 16ರಂದು ಸಾಮೂಹಿಕವಾಗಿ ಪೂಜೆ ಸಲ್ಲಿಸಿದರು. ಸುಗ್ಗಿ ಮಾಸದ ಹುಣ್ಣಿಮೆಯ ದಿವಸ ಆಚರಿಸುವ ವಿಶೇಷ ಆಚರಣೆ ತುಳುನಾಡಿನಲ್ಲಿ ಮನೆ ಮಾತಾಗಿದೆ ಪೂಜಾ ವಿಧಿ ವಿಧಾನವನ್ನು ಪುರುಷರ ಬಳಗದ ಅಧ್ಯಕ್ಷ ಮಾಲಿಂಗ ಗೌಡ ಬರೆಂಗಾಯ ನೆರವೇರಿಸಿದರು. ಕಾರ್ಯದರ್ಶಿ ಪೊರ್ದಿಲ ಹರೀಶ್ ಗೌಡ, ಕಜೆ ಸುಂದರ ಗೌಡ, ಡೀಕಯ್ಯ ಕೊಂಕ ಹಾಗೂ ಪುರುಷರ ವೇಷಧಾರಿಗಳು, ಊರಿನ ಹಿರಿಯರು, ಮಹಿಳೆಯರು, ಮಕ್ಕಳು ಉಪಸ್ಥಿತರಿದ್ದರು.