

ಬೆಳ್ತಂಗಡಿ: ನಡ – ಕನ್ಯಾಡಿ ಗ್ರಾಮ ಸಮಿತಿ ರಚನೆಯು ಕೆ.ಪಿ.ಸಿ.ಸಿ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಹಾಗೂ ರಾಜ್ಯ ಯುವ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್ ಹಾಗೂ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಸಮ್ಮುಖದಲ್ಲಿ ನಡ ಮತ್ತು ಕನ್ಯಾಡಿ ಕಾಂಗ್ರೆಸ್ ಗ್ರಾಮ ಸಮಿತಿಯ ಅಧ್ಯಕ್ಷರಾಗಿ ಜಾಕೀರ್ ಹುಸೇನ್ ಮಂಜೊಟ್ಟಿ ಇವರನ್ನು ಸರ್ವನುಮತದಿಂದ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ತಿರುಮಲೆಶ್ವರ ಗೌಡ, ಪ್ರಧಾನ ಕಾರ್ಯದರ್ಶಿಯಾಗಿ ಸ್ಟಾನ್ಲಿ ಪಿಂಟೋ ಸುರ್ಯ, ಸುನಿತಾ ಕುತ್ರೊಟ್ಟು, ಕಾರ್ಯದರ್ಶಿಗಳಾಗಿ ಲಲಿತ ಒಬಯ್ಯ ಗೌಡ, ಬಿ.ಎ.ರಝಕ್, ಸದಸ್ಯರುಗಳು ಪ್ರವೀಣ್ ಪಿಂಟೋ ಸುರ್ಯ, ದಿವಾಕರ್ ಸಾಲಿಯಾನ್, ಜೈಸನ್, ಶರ್ಮಿಳಾ, ಶ್ರೀಧರ, ಬೌತಿಸ್ ಮಿರಂದ, ಇವರನ್ನು ಆಯ್ಕೆ ಮಾಡಲಾಯಿತು.