

ಉಜಿರೆ: ಪಾಸ್ಕಾ ಹಬ್ಬದ ಅಂಗವಾಗಿ ಯೇಸು ಕ್ರಿಸ್ತರ ಶಿಲುಬೆಗೆರುವ ಮುಂದಿನ ದಿನ ತನ್ನ 12ಜನ ಶಿಷ್ಯರೊಂದಿಗೆ ಸೇವಿಸುವ ಕೊನೆಯ ಭೋಜನದ ಸವಿ ನೆನಪಿಗೆ ಆಚರಿಸುವ ಯೇಸು ಕ್ರಿಸ್ತರ ಕೊನೆಯ ಭೋಜನ ಎ. 17ರಂದು ಆಚರಿಸಲಾಯಿತು.
ಪವಿತ್ರ ಸಂಸ್ಕಾರ ಸ್ಥಾಪಿಸಿದ ದಿನ. ಯೇಸು ಕ್ರಿಸ್ತರು ತನ್ನ ಶಿಷ್ಯರ ಕಾಲು ತೊಳೆಯುದರೊಂದಿಗೆ ನಾವು ಪರಸ್ಪರ ಪ್ರೀತಿಸುವ ಸಂದೇಶವನ್ನು ನೀಡುವ ದಿನ ಮತ್ತು ಧರ್ಮಗುರುಗಳು ಬಲಿ ಪೀಠದಲ್ಲಿ ಇದೇ ದಿನದಂದು ಬಲಿಪೂಜೆಗಳು ಪ್ರಾರಂಭಗೊಂಡ ದಿನವಾಗಿದೆ. ಎಂದು ದಯಾಳ್ ಭಾಗ್ ಆಶ್ರಮದ ಸುಪೀರಿಯರ್ ಫಾ. ಪಡ್ರಿಕ್ಸ್ ಬ್ರಗ್ಸ್ ಹೇಳಿದರು.
ಚರ್ಚ್ ಧರ್ಮಗುರು ಫಾ. ಅಬೆಲ್ ಲೋಬೊ, ಅನುಗ್ರಹ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಫಾ. ವಿಜಯ್ ಲೋಬೊ ಹಾಗೂ ಸಮಸ್ತ ಕ್ರೈಸ್ತ ಭಾಂದವರು ಉಪಸ್ಥಿತರಿದ್ದು, ಪವಿತ್ರ ಬಲಿ ಪೂಜೆಯಲ್ಲಿ ಭಾಗವಹಿಸಿ ಯೇಸು ಕ್ರಿಸ್ತರ ಆಶೀರ್ವಾದ ಪಡೆದರು.