

ಕನ್ಯಾಡಿ: ಉಜಿರೆ ಗ್ರಾಮದ ಕನ್ಯಾಡಿ 1 ತುಳುನಾಡಿನ ಸತ್ಯನಾಪುರದ ಸತ್ಯದ ಸಿರಿಗಳ ಮೂಲ ಆಲಡೆಯ ಪುಣ್ಯಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೆ, ನಡ್ವಾಲ್ ಸಿರಿಜಾತ್ರಾ ಮಹೋತ್ಸವ, ನಾಗದರ್ಶನ, ಆಶ್ಲೇಷಾ ಬಲಿ ಮತ್ತು ದೈವಗಳ ನೇಮೋತ್ಸವವು ಎ.10ರಿಂದ ಎ.14ರವರೆಗೆ ವಿವಿಧ ಧಾರ್ಮಿಕ ಮತ್ತು ವೈದಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಎ.10ರಂದು ಬೆಳಿಗ್ಗೆ ನೇತ್ರಾವತಿಯ ಮೈಂದ್ರಣ್ಣಾಯ (ಜಪದ ಗುಂಡಿ) ಗುಂಡಿಯಿಂದ ತೀರ್ಥವನ್ನು ತಂದು ಬಳಿಕ, ಸ್ವಸ್ತಿ ಪುಣ್ಯಾಹ, ಗಣಯಾಗ, ನವಕ ಪ್ರಧಾನ, ಸತ್ಯನಾಪುರ ಅರಮನೆಯಿಂದ ಹೂ-ಹಿಂಗಾರ ತರುವ ಕಾರ್ಯಕ್ರಮ ನಡೆಯಿತು.
ಬೆಳಿಗ್ಗೆ ಹಸಿರುವಾಣಿ ಹೊರೆ ಕಾಣಿಕೆ ಸಮರ್ಪಣೆ, 11ಕ್ಕೆ ಧ್ವಜಾರೋಹಣ, ಶ್ರೀ ದೇವರ ಬಲಿ, ಮಹಾಪೂಜೆಯ ಬಳಿಕ ಮಧ್ಯಾಹ್ನ ಪಲ್ಲಪೂಜೆ ನಡೆದು ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು. ಬಳಿಕ, ಸಾಯಂಕಾಲ 5.30ರಿಂದ ಗುರಿಪಳ್ಳ ಶ್ರೀ ಗುರು ರಾಘವೇಂದ್ರ ಭಜನಾ ಮಂಡಳಿಯಿಂದ ಕುಣಿತ ಭಜನೆ, ರಾತ್ರಿ ದೇವರ ಉತ್ಸವ, ದೀಪಾರಾಧನೆ ನಡೆದು ಬಳಿಕ, ಭೂತರಾಜ, ಮಹಿಷಂತಾಯ, ಮೂರ್ತಿಲ್ಲಾಯ ದೈವಗಳ ನೇಮೋತ್ಸವ ಜರಗಿತು.
ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ರಕ್ಷಿತ್ ಶಿವರಾಂ, ಪಾಂಡುರಂಗ ಮಾರಾಟೆ ಹಡೀಲು, ಜಾತ್ರೋತ್ಸವ ಸಮಿತಿ ಅಧ್ಯಕ್ಷ, ಗುರುರಾಜ್ ಗುರಿಪಳ್ಳ ಅಧ್ಯಕ್ಷ ವ್ಯವಸ್ಥಾಪನಾ ಸಮಿತಿ, ಚಂದ್ರಹಾಸ ಪಟವರ್ಧನ್ ಆರ್ಚಕರು, ಪ್ರಧಾನ ಕಾರ್ಯದರ್ಶಿ ಸದಾನಂದ ಪೂಜಾರಿ ಕೊಡೆಕಲ್, ಯಶೋಧರ್ ಗೌಡ ಕೊಡ್ಡೋಲ್, ಪ್ರಸಾದ್ ಕುಮಾರ್ ಏನೀರು, ನಾಣ್ಯಪ್ಪ ಪೂಜಾರಿ ಗೋಳಿದೊಟ್ಟು, ಪ್ರವೀಣ್ ವಿ.ಜಿ., ನಾಗೇಶ್ ಎಂ., ಪ್ರೇಮಾ ಗೋಳಿದೊಟ್ಟು, ಕೇಶವತಿ ಪಾಲೆದಡಿ, ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ವಿಲಯದವರ, ಗ್ರಾಮಸ್ಥರ ಉಪಸ್ಥಿತರಿದ್ದರು.