ಎ.13-17: ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ

0

ಕುತ್ಲೂರು: ಶ್ರೀ ಕೊಡಮಣಿತ್ತಾಯ ದೈವದ ವರ್ಷಾವಧಿ ಜಾತ್ರೋತ್ಸವ ಎ. 13ರಿಂದ 17ರವರೆಗೆ ನಡೆಯಲಿದೆ.

ಎ. 13ರಂದು ಮೇಷ ಸಂಕ್ರಮಣದ ದಿನ ಬೆಳಿಗ್ಗೆ ಪರುಷಗುಡ್ಡೆ ಬಸದಿ ಶ್ರೀ ಶಾಂತಿನಾಥ ಸ್ವಾಮಿಗೆ ಕ್ಷೀರಾಭಿಷೇಕ, ಮಹಾಮಾತೆ ಶ್ರೀ ಪದ್ಮಾವತಿ ದೇವಿಗೆ ಮಹಾಪೂಜೆ ಹಾಗೂ ಕ್ಷೇತ್ರದ ನಾಗ ದೇವರಿಗೆ ನಾಗತಂಬಿಲ, ದೈವಸ್ಥಾನದಲ್ಲಿ ಗಣಹೋಮ ಮತ್ತು ಪರ್ವ ಸಂಕ್ರಾಂತಿ, ಸಾಯಂಕಾಲ ಗಂಟೆ 4.00ಕ್ಕೆ ಪಾಂಡ್ಯಪ್ಪರೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿಯುವುದು, ದೈವಸ್ಥಾನಕ್ಕೆ ಆಗಮನ, ಧ್ವಜಾರೋಹಣ, ಬಲಿ, ಚೆಂಡು ಇತ್ಯಾದಿ, ರಾತ್ರಿ ಗಂಟೆ 7.00ರಿಂದ ಶಾಲಾ ಮಕ್ಕಳಿಂದ ‘ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ ಗಂಟೆ 9ರಿಂದ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಮಂಡಳಿ ಅತ್ರಿಜಾಲು ಇವರಿಂದ ಕಾರಿಂಜ ಕಾಂಜವೆ ತುಳು ಯಕ್ಷಗಾನ ಬಯಲಾಟ.

ಎ. 14ರಂದು ಭೂತಬಲಿ, ಉತ್ಸವ ಇತ್ಯಾದಿ, ಸಂಜೆ ಗಂಟೆ 6.00ರಿಂದ ಅಂಗನವಾಡಿ ಕೇಂದ್ರ ಕುತ್ಲೂರು ಇದರ ಪುಟಾಣಿಗಳಿಂದ ಹಾಗೂ ಸ.ಉ.ಪ್ರಾ. ಶಾಲೆ ಕುತ್ಲೂರು ಮತ್ತು ಹಳೆ ವಿದ್ಯಾರ್ಥಿ ಸಂಘದವರಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ.

ಎ. 15ರಂದು ಮಧ್ಯಾಹ್ನ ಗಂಟೆ 12.00ಕ್ಕೆ ಮಹಾಪೂಜೆ, ಹೂವಿನ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ ರಾತ್ರಿ ಗಂಟೆ 700ರಿಂದ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ’ ರಾತ್ರಿ ಗಂಟೆ 8.00ರಿಂದ ಉಪಾಹಾರ, ಗಂಟೆ 7.30ರಿಂದ ಧಾರ್ಮಿಕ ಸಭೆ, ಉತ್ಸವ ಮತ್ತು ಕೊಡಮಣಿತ್ತಾಯ ದೈವದ ಹಾಗೂ ಪರಿವಾರ ದೈವ ಗಳ ಕುರೋಜನ ನೇಮೋತ್ಸವ.

ಎ. 16ರಂದು ಧ್ವಜ ಅವರೋಹಣ, ಭಂಡಾರ ಹಿಂತಿರುಗುವುದು.

ಎ. 17ರಂದು ಬೆಳಿಗ್ಗೆ ಗಂಟೆ 9.15ಕ್ಕೆ ಪಾಂಡ್ಯಪ್ಪರೆ ಗುತ್ತಿನಿಂದ ಶ್ರೀ ಕೊಡಮಣಿತ್ತಾಯ ದೈವದ ಭಂಡಾರ ಇಳಿಯುವುದು ದೈವಸ್ಥಾನಕ್ಕೆ ಆಗಮನ ಕುರುಸಂಬಿಲ ನೇಮ ನಡೆಯಲಿದೆ.

LEAVE A REPLY

Please enter your comment!
Please enter your name here